Ticker

6/recent/ticker-posts

Ad Code

ಮೊಗೇರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಡಿ.26ಕ್ಕೆ ಏಕಾಹ ಭಜನೋತ್ಸವ ಮತ್ತು ದುರ್ಗಾನಮಸ್ಕಾರ ಪೂಜೆ

ಪೆರ್ಲ: ಕಾಟುಕುಕ್ಕೆ ಸಮೀಪದ ಮೊಗೇರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ದುರ್ಗಾಪರಮೇಶ್ವರೀ ಭಜನಾ ಸಮಿತಿಯ 22ನೇ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಶ್ರೀ ದುರ್ಗಾನಮಸ್ಕಾರ ಪೂಜೆ ಡಿಸೆಂಬರ್ 26ರಂದು ಜರಗಲಿದೆ. ಇದರ ಅಂಗವಾಗಿ  ದಿನ 6.01 ಕ್ಕೆ ದೇವತಾ ಪ್ರಾರ್ಥನೆ, ಭಜನಾರಂಭ, ಕ್ಷೇತ್ರದ ಆಡಳಿತ ಮೊಕ್ತೇಸರ. ರಾಮಚಂದ್ರ ನಾಯಕ್ ಅವರು ದೀಪ ಪ್ರಜ್ವಲನೆಗೈದು ಭಜನೆಗೆ ಚಾಲನೆ ನೀಡುವರು. ಸೂರ್ಯೋದಯದಿಂದ ಮರುದಿನ  ಸೂರ್ಯೋದಯದವರೆಗೆ ವಿವಿಧ ತಂಡಗಳಿಂದ ಏಕಾಹ ಭಜನಾ ಸೇವೆ ಮತ್ತು  ಸೂರ್ಯಾಸ್ತದ ಬಳಿಕ ಸಾಮೂಹಿಕ ಶ್ರೀ ದುರ್ಗಾನಮಸ್ಕಾರ ಪೂಜೆ ಜರಗಲಿದೆ.

Post a Comment

0 Comments