Ticker

6/recent/ticker-posts

Ad Code

ಅಪ್ರಾಪ್ತೆ ಬಾಲಕಿಯ ಕೈಯಲ್ಲಿದ್ದ ದುಬಾರಿ ಪೋನ್ ಬಗ್ಗೆ ವಿಚಾರಣೆ ವೇಳೆ ಬೆಳಕಿಗೆ ಬಂದ ಲೈಂಗಿಕ ದೌರ್ಜನ್ಯ ಪ್ರಕರಣ

 

ಕಾಸರಗೋಡು : ಪ್ಲಸ್ ವನ್ ತರಗತಿಗೆ ತೆರಳುವ ಬಾಲಕಿಯ ಕೈಯಲ್ಲಿ ದುಬಾರಿ ಬೆಲೆಯ ಫೋನ್ ಕಂಡು ಮನೆಯವರು ವಿಚಾರಣೆಗೊಳಪಡಿಸಿದಾಗ ನಿರಂತರ  ಅತ್ಯಾಚಾರದ ಪ್ರಕರಣವೊಂದು ಕಣ್ಣೂರಿನಲ್ಲಿ ಬೆಳಕಿಗೆ ಬಂದಿದೆ. ಈ  ಬಗ್ಗೆ 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಖಾಸಗಿ ಬಸ್ ಚಾಲಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರಿನ ಅತಜಕ್ಕುನ್ನು ಮೂಲದ ದಿಪಿನ್ ಎಂಬಾತನನ್ನು ಕಣ್ಣೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಹತ್ತನೇ ತರಗತಿಯಲ್ಲಿದ್ದಾಗ ದಿಪಿನ್ ಈಕೆಯನ್ನು ಪರಿಚಯಿಸಿಕೊಂಡಿದ್ದು ಬಳಿಕ ಪ್ರೀತಿಯ ನಾಟಕವಾಡಿ   ಬಾಲಕಿಗೆ ದುಬಾರಿ ಬೆಲೆಯ ಮೊಬೈಲ್ ಫೋನ್ ಖರೀದಿಸಿ ಸಂಪರ್ಕ ಬೆಳೆಸಿದ್ದ.ಈ ಮಧ್ಯೆ ಬಾಲಕಿಯನ್ನು ಕಕ್ಕಡ್‌ನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕರೆದೊಯ್ದು ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಹಲವಾರು ಬಾರಿ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಲಾಗಿದೆ. ಬಾಲಕಿಯ ಹೊಸ ಮೊಬೈಲ್ ಫೋನ್ ನೋಡಿದ ನಂತರ ಕುಟುಂಬಕ್ಕೆ ಅನುಮಾನ ಬಂದು ಆಕೆಯನ್ನು ಪ್ರಶ್ನಿಸಿದಾಗ ಈ ಮಾಹಿತಿ ಹೊರ ಬಿದ್ದಿದೆ. ಕುಟುಂಬವು ಈತನ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದ ನಂತರ ಅತ್ಯಾಚಾರದ ಮಾಹಿತಿ ಬೆಳಕಿಗೆ ಬಂದಿತು. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಯುವಕನನ್ನು  ರಿಮಾಂಡಿನಲ್ಲಿರಿಸಲಾಗಿದೆ.

Post a Comment

0 Comments