Ticker

6/recent/ticker-posts

Ad Code

ನಾಳೆ ನಾರಾಯಣ ಮಂಗಲದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶ್ರೀ ಸತ್ಯನಾರಾಯಣ ಪೂಜೆ - ಧಾರ್ಮಿಕ ಸಭೆ

ಕುಂಬಳೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಂಜೇಶ್ವರ ತಾಲೂಕು ಹಾಗೂ ಕುಂಬಳೆ ವಲಯದ ಕೋಟೆಕ್ಕಾರು, ಕಂಚಿಕಟ್ಟೆ, ಕಳತ್ತೂರು, ಕಿದೂರು, ಮಡ್ಡ, ಪೇರಾಲ್, ನಾರಾಯಣಮಂಗಲ, ಬಂಬ್ರಾಣ, ದೇವಿನಗರ ಒಕ್ಕೂಟಗಳ ಸಹಯೋಗದೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಡಾ। ಹೇಮಾವತಿ ವೀ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಡಿಸೆಂಬರ್  28 ಆದಿತ್ಯವಾರ  ಬೆಳಗ್ಗೆ 8-00 ಗಂಟೆಯಿಂದ ಶ್ರೀ ಚೀರುಂಬಾ ಭಗವತೀ ಸಭಾ ಭವನ, ನಾರಾಯಣಮಂಗಲದಲ್ಲಿ ನಡೆಯಲಿದೆ. ಇದರ ಅಂಗವಾಗಿ ಬೆಳಗ್ಗೆ ಗಂಟೆ 8ರಿಂದ  ಭಜನೆ, 8-30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, 11-30ಕ್ಕೆ  ಮಹಾಮಂಗಳಾರತಿ, ಪ್ರಸಾದ ವಿತರಣೆ, ಬೆಳಗ್ಗೆ ಗಂಟೆ 12ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮಂಜೇಶ್ವರ ತಾಲೂಕು ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ದೀಪ ಪ್ರಜ್ವಲನೆಗೈಯುವರು. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷೆ ಜಯಂತಿ ಅಧ್ಯಕ್ಷತೆ ವಹಿಸುವರು. ಕೊಂಡೆವೂರು ಶ್ರೀಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನಗೈಯುವರು. ಉದ್ಯಮಿ ನಾರಾಯಣ ಪ್ರಭು, ಉದ್ಯಮಿ, ಧಾರ್ಮಿಕ ಮುಖಂಡ ಯೋಗೀಶ ಕಡಮಣ್ಣಾಯ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕಾಸರಗೋಡು ಸ್ಥಾಪಕ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಮಂಜುನಾಥ ಆಳ್ವ ಮಧ್ವ, ಅಶ್ವಥ ಪೂಜಾರಿ ಲಾಲ್‌ಭಾಗ್, ಯೋಜನಾಧಿಕಾರಿ ಶಶಿಕಲಾ  ಸುವರ್ಣ, ಜನಜಾಗೃತಿ ವೇದಿಕೆ ಕುಂಬಳೆ ವಲಯ ಅಧ್ಯಕ್ಷ  ಮಹೇಶ್ ಪುಣಿಯೂರು, ಭಜನಾ ಪರಿಷತ್ತು ಕುಂಬಳೆ ವಲಯ ಅಧ್ಯಕ್ಷೆ ಗಿರಿಜ, ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಆಡಳಿತ ಸಮಿತಿ ಕಾರ್ಯದರ್ಶಿ ನರೇಂದ್ರ ಬಿ.ಎನ್ ಮುಖ್ಯ ಅತಿಥಿಗಳಾಗಿರುವರು. ಈ ಸಂದರ್ಭ ಸಾಧಕರಿಗೆ ಗೌರವಾರ್ಪಣೆ ಜರಗಲಿದೆ. ಬಳಿಕ ಮಧ್ಯಾಹ್ನ ಗಂಟೆ 2:30ರಿಂದ ವಲಯ ಒಕ್ಕೂಟದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.

Post a Comment

0 Comments