ಕಾಸರಗೋಡು: ದೇವರಗುಡ್ಡೆ ಶ್ರೀ ಶೈಲ ಮಹಾದೇವ ಸನ್ನಿಧಿಯಲ್ಲಿ ಧನುರ್ಮಾಸ ಪ್ರಯುಕ್ತ ಧನುಪೂಜೆಯ ಅಂಗವಾಗಿ ಪಾರೆಕಟ್ಟೆ ಶ್ರೀ ಮುತ್ತಪ್ಪ ಕ್ಷೇತ್ರದಿಂದ ಭಜನಾ ಸಂಕೀರ್ತನೆಯೊಂದಿಗೆ ಶ್ರೀ ಕ್ಷೇತ್ರಕ್ಕೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಶ್ರೀ ಮುತ್ತಪ್ಪ ಕ್ಷೇತ್ರದ ಪ್ರಮುಖರು ಹಾಗೂ ಗಣೇಶ ಪಾರಕಟ್ಟೆ ಕ್ಷೇತ್ರದ ಮಡೆಯನ್ಮಾರ್, ಭಜನಾ ಸಂಘದವರು ಧನುಪೂಜಾ ಸಮಿತಿಯ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ ಮಹೇಶ, ಸುಭಾಸ್ ಪಾಟಾಳಿ, ಗಣೇಶ ನಾಯ್ಕ, ನಿಶಾಂತ್, ಮಹಾಬಲ ರೈ, ಶ್ರೀನಿವಾಸ ನಾಯ್ಕ, ಕ್ಷೇತ್ರದ ಅರ್ಚಕ ಶ್ರೀ ರಾಮ ಭಟ್, ವಸಂತ, ಬಾನುಪ್ರಕಾಶ್, ಗಣೇಶ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಗವದ್ಭಕ್ತರು ಭಾಗವಹಿಸಿದರು.

0 Comments