Ticker

6/recent/ticker-posts

Ad Code

ಮೈಸೂರಿನಿಂದ ಕೇರಳಕ್ಕೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಬೆಂಕಿಗಾಹುತಿ : ಪ್ರಯಾಣಿಕರು ಪಾರು

 

ಮೈಸೂರು : ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸೊಂದು ಮೈಸೂರಿನಿಂದ ಕೇರಳಕ್ಕೆ ಬರುವ ವೇಳೆ  ಹೊಸಹಳ್ಳಿ ಎಂಬಲ್ಲಿ ಬೆಂಕಿಗಾಹುತಿಯಾಗಿದೆ. ಬಸ್ ನಲ್ಲಿದ್ದ 40 ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರಿನಿಂದ ಕೇರಳಕ್ಕೆ ತೆರಳುತ್ತಿದ್ದ KL-15,  A- 2444 ನೊಂದಣಿ ಸಂಖ್ಯೆ ಬಸ್ ನಲ್ಲಿ ಮಧ್ಯರಾತ್ರಿ ಸರಿಸುಮಾರು 3 ಗಂಟೆಯ ವೇಳೆ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು ಎಚ್ಚೆತ್ತ ಚಾಲಕ ಹೊಸಹಳ್ಳಿ ಗೇಟ್ ಬಳಿ ನಿಲ್ಲಿಸಿ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬಾರಿ ಪ್ರಮಾಣದ ಬೆಂಕಿ ವ್ಯಾಪಿಸಿ ಬಸ್ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ಸಿಬ್ಬಂದಿಗಳ ಆಗಮನಕ್ಕೆ ಮುನ್ನವೇ ಬಸ್ ಸುಟ್ಟು ಹೋಗಿದೆ. ಇದರಲ್ಲಿದ್ದ ಪ್ರಯಾಣಿಕರಿಗೆ ಪರ್ಯಾಯ ಬಸ್ ವ್ಯವಸ್ಥೆ ಮಾಡಲಾಗಿತ್ತು. ನಂಜನಗೂಡು ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments