ಬದಿಯಡ್ಕ : ಅಂಬೇಡ್ಕರ್ ವಿಚಾರ ವೇದಿಕೆಯ ನೇತೃತ್ವದಲ್ಲಿ ಬಾರಡ್ಕ ಅಂಬೇಡ್ಕರ್ ನಗರದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರರ 135ನೇ ಜನ್ಮದಿನವನ್ನು ಆಚರಿಸಲಾಯಿತು. ಹಿರಿಯ ಕವಿ, ಸಾಹಿತಿ ರಾಧಾಕೃಷ್ಣ .ಕೆ. ಉಳಿಯತ್ತಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಾಯೋತ್ ಸರಕಾರಿ ಹೈಯರ್ ಸೆಕಂಡರಿ ಶಾಲೆಯ ಅಧ್ಯಾಪಕಿ ಆಶಾಕಿರಣ ದರ್ಬೆತ್ತಡ್ಕ ಅವರು ಅಂಬೇಡ್ಕರರ ಭಾವಚಿತ್ರಕ್ಕೆ ಹಾರಾರ್ಪಣೆಗೈದರು, ಉಳಿಯತ್ತಡ್ಕ ಪ್ರಗತಿ ಶಾಲೆಯ ನಿರ್ದೇಶಕ ಉದಯಕುಮಾರ್ ಮುಂಡೋಡು, ಸಾಮಾಜಿಕ ಕಾರ್ಯಕರ್ತ ನಾರಾಯಣ ಪಂಜಿತ್ತಡ್ಕ, ಜಾನಪದ ಕಲಾವಿದ ಶಂಕರ ಸ್ವಾಮಿಕೃಪಾ, ಸಂದೀಪ್ ಬಾರಡ್ಕ ಶುಭ ಹಾರೈಸಿದರು. ಬಾಲಕೃಷ್ಣ ಮುರಿಯಂಕೂಡ್ಲು, ವಸಂತ ಬಾರಡ್ಕ, ಉಷಾಕಿರಣ ದರ್ಬೆತ್ತಡ್ಕ ಉಪಸ್ಥಿತರಿದ್ದರು. ಸುರೇಖಾ ಬಾರಡ್ಕ ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು. ರಾಮ ಪಟ್ಟಾಜೆ ನಿರೂಪಿಸಿದರು.

0 Comments