Ticker

6/recent/ticker-posts

Ad Code

ರಂಗಚೇತನದಿಂದ 'ಚಿತ್ತಾರ-26' ಮಕ್ಕಳ ಶಿಬಿರ ಸಂಪನ್ನ

 

ಕಾಸರಗೋಡು : ಕನ್ನಡ ಅಧ್ಯಾಪಕರ ಸಾಂಸ್ಕೃತಿಕ ಮತ್ತು ಸಾಹಿತ್ಯಕ ವೇದಿಕೆಯಾದ ರಂಗಚೇತನ ಕಾಸರಗೋಡು ಇದರ ಆಶ್ರಯದಲ್ಲಿ ಆರನೇ ವರ್ಷದ ಮಕ್ಕಳ ಬೇಸಿಗೆ ಶಿಬಿರ, ಚಿಣ್ಣರ ದೃಶ್ಯಕಾವ್ಯ, ಚಿತ್ತಾರ - 26 ಏಪ್ರಿಲ್ ತಿಂಗಳ 11, 12 ಮತ್ತು 13ರಂದು  ಎಸ್ ಎಸ್ ಯು ಪಿ ಶಾಲೆ ಚೇವಾರು ಇಲ್ಲಿ ನಡೆಯಿತು. ಏಪ್ರಿಲ್  11ರಂದು ಸಂಘಟನೆಯ ಅಧ್ಯಕ್ಷರಾದ  ಯತೀಶ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಮಂಜೇಶ್ವರ ಉಪ ಜಿಲ್ಲಾ ಶಿಕ್ಷಣಾಧಿಕಾರಿ  ಜಾರ್ಜ್ ಕ್ರಾಸ್ತಾ ಅವರು ಸನಿವಾಸ ಶಿಬಿರವನ್ನು ಉದ್ಘಾಟಿಸಿದರು. ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕ ಸಂಘದ ಕಾರ್ಯದರ್ಶಿಯಾದ  ಪ್ರದೀಪ್ ಕುಮಾರ್ ಶೆಟ್ಟಿ, ಪತ್ರಕರ್ತ ನಾರಾಯಣ ಚಂಬಲ್ತಿಮಾರ್ ಮುಖ್ಯ ಅತಿಥಿಯಾಗಿದ್ದರು. ಕಾಸರಗೋಡು ಜಿಲ್ಲೆಯಿಂದ ಆಯ್ದ 50  ಪ್ರತಿಭಾನ್ವಿತ ಮಕ್ಕಳು ಈ  ಮೂರು ದಿನದ ಸನಿವಾಸ ಶಿಬಿರದಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿದರು.

ರಂಗಕಲೆ, ಅಭಿನಯ, ಸಂವಹನ, ಮಾಯಾಜಾಲ, ಮಿಮಿಕ್ರಿ, ಪಕ್ಷಿ ವೀಕ್ಷಣೆ, ಕಲಾವಿದರ ಭವನ ಸಂದರ್ಶನ, ನಾಟಕ-ಸಂಭಾಷಣೆ ರಂಗಗೀತೆ, ರಂಗದ ನೆರಳು ಬೆಳಕು, ರಂಗ ಪರಿಕರ ತಯಾರಿ, ಯೋಗ, ರಂಗ ವಿನ್ಯಾಸ, ಆವಿಷ್ಕಾರ ವಿಷಯಗಳಲ್ಲಿ ಶಿಬಿರದ ನಿರ್ದೇಶಕರಾಗಿದ್ದ ದಿವಾಕರ ಬಲ್ಲಾಳ್, ಸದಾಶಿವ ಬಾಲ ಮಿತ್ರ  ಅಲ್ಲದೆ, ನಿರ್ಮಲ್ ಕುಮಾರ್, ಬಾಲಸುಬ್ರಹ್ಮಣ್ಯಂ, ಸುರೇಶ್ ಯಾದವ್ ಮುಳ್ಳೇರಿಯ, ರಾಜು ಕಿದೂರು, ವರ್ಣ ಕಲಾವಿದ ವಿಶ್ವಾಸ್, ಬಾಸುಮ ಕೊಡಗು, ಸುಧೀಶ್ ಕಾಸರಗೋಡು, ಪ್ರಕಾಶ್ ಕುಂಬಳೆ, ಸಾತ್ವಿಕ್, ವಸಂತ ಮೂಡಂಬೈಲು, ಕೃಷ್ಣಪ್ಪ ಬಂಬಿಲ, ಮೊದಲಾದ ಸಂಪನ್ಮೂಲ ವ್ಯಕ್ತಿಗಳು ಬಹಳ ಸೊಗಸಾದ ತರಗತಿಗಳನ್ನು ನಡೆಸಿದರು. ಸಮರೋಪ ಸಮಾರಂಭವನ್ನು  ನಿವೃತ್ತ ಕಾಸರಗೋಡು ಜಿಲ್ಲಾ ಉಪ ನಿರ್ದೇಶಕರಾದ ಇಬ್ರಾಹಿಂ ಬಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಸ್ತುತ  ಶಾಲೆಯಿಂದ ನಿವೃತ್ತರಾಗಲಿರುವ ಮುಖ್ಯೋಪಾಧ್ಯಾಯರು ಮತ್ತು ಉತ್ತಮ ಅಧ್ಯಾಪಕ ಸಂಘಟಕ ಶಾಂ ಭಟ್.ಯು ಮತ್ತು ಎಸ್. ಎಸ್. ಕೆ ಯೋಜನಾಧಿಕಾರಿ  ಆಗಸ್ಟ ಬರ್ನಾಡ್ ಮತ್ತು ಪಿ ಎಚ್ ಡಿ ಪದವಿ ಪಡೆದ ಅಧ್ಯಕ್ಷರಾದ ಯತೀಶ್ ಕುಮಾರ್ ರೈ  ಹಾಗೂ ಇಬ್ರಾಹಿಂ ಬಿ.ಅವರನ್ನು ಗೌರವಿಸಲಾಯಿತು. ಸಂಘಟನೆಯ ಉಪಾಧ್ಯಕ್ಷ ವಿಜಯಕುಮಾರ್ ಬಿ.ಸ್ವಾಗತಿಸಿ, ಕಾರ್ಯದರ್ಶಿ ಗೋಪಾಲ ಕಾಟುಕುಕ್ಕೆ ವಂದಿಸಿದರು. 

ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯರಾದ  ಅಶೋಕ ಕೊಡ್ಲಮೊಗರು,  ಶಿವಪ್ರಸಾದ್ ರಾವ್ ಪೈವಳಿಕೆ, ಶಿವರಾಮ ಕಾಟುಕುಕ್ಕೆ,  ಮೆಲ್ವಿನ್ ಪೆರ್ಮುದೆ, ರಾಜ ಕುಮಾರ್ ಕಾಟುಕುಕ್ಕೆ, ಉದಯ ಸಾರಂಗ್, ಪ್ರಮೀಳಾ ಟೀಚರ್, ಶಿವಪ್ರಸಾದ್ ಚಿರುಗೋಳಿ, ಪ್ರಸಾದ್ ಮುಗು ವಿವಿಧ ಜವಾಬ್ದಾರಿಗಳ ನಿರ್ವಹಣೆ ಮಾಡಿದ್ದರು. ರಂಗಕಲೆ ಮತ್ತು ಶಿಕ್ಷಣ ಕ್ಷೇತ್ರದ ಅಭಿಮಾನಿಗಳು ಮತ್ತು ಪ್ರೋತ್ಸಾಹಕರಾದ ಬೇಕಲ ಉಪಶಿಕ್ಷಣಾಧಿಕಾರಿ ಅರವಿಂದ, ನಿವೃತ್ತ ಮುಖ್ಯೋಪಾಧ್ಯಾಯ  ಪ್ರಕಾಶ್ ಮಾಸ್ತರ್, ಧರ್ಮತಡ್ಕ ಶಾಲೆಯ ಪ್ರಾಂಶುಪಾಲ ಶ್ರೀರಾಮಚಂದ್ರ ಭಟ್, ಕಾಸರಗೋಡು ಉಪ ಶಿಕ್ಷಣಾಧಿಕಾರಿ  ನಾರಾಯಣ ದೇಲಂಪಾಡಿ, ಉದಯಗಿರಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಧರ ಭಟ್, ಬಂಬ್ರಾಣ ಶಾಲೆಯ ಮುಖ್ಯೋಪಾದ್ಯಾಯ  ಸತ್ಯಪ್ರಕಾಶ್ , ರಾಜೇಶ್ ಉಬ್ರಂಗಳ, ಪಬ್ಲಿಕ್ ಪ್ರಾಸಿಕ್ಯೂಟರ್   ಅಡ್ವ ಚಂದ್ರಮೋಹನ, ನಿವೃತ್ತ ಅಧ್ಯಾಪಕ  ವೆಂಕಟರಮಣ ಎನ್, ಸುನಿಲ್ ಕುಮಾರ್ ಮಯ್ಯಳ, ಗುರುರಾಜ್ ಕೋಳ್ಯೂರು ಮೊದಲಾದ ಗಣ್ಯರು ಶಿಬಿರದ ವಿವಿಧ ಸಂದರ್ಭಗಳಲ್ಲಿ ಭಾಗವಹಿಸಿ ಶುಭ ಹಾರೈಸಿದರು.

Post a Comment

0 Comments