ಮಂಜೇಶ್ವರ : ಬಲ್ಲಂಗುಡೆಲು ಶ್ರೀ ಪಾಡಂಗರೆ ಭಗವತಿ ಭಕ್ತವೃಂದ ಗಲ್ಫ್ ನ ವತಿಯಿಂದ ಗಲ್ಫ್ ರಾಷ್ಟ್ರಗಳಲ್ಲಿರುವ ಭಕ್ತರ ಕಲ್ಯಾಣಕ್ಕಾಗಿ ವಿಶೇಷ ದೀಪಾರಾಧನೆ ಸೇವೆ ಮತ್ತು ವಿಶೇಷ ಪ್ರಾರ್ಥನೆ ಎಪ್ರಿಲ್ ಹತ್ತರಂದು ಬಲ್ಲಂಗುಡೆಲು ಶ್ರೀ ಪಾಡಂಗರೆ ಭಗವತಿ ಕ್ಷೇತ್ರದ ಭಂಡಾರ ನಿಲಯದಲ್ಲಿ ನಡೆಯಿತು.
ಗಲ್ಫ್ ರಾಷ್ಟ್ರಗಳಲ್ಲಿ ಇರುವ ಅಮ್ಮನ ಭಕ್ತರು ಪ್ರಸ್ತುತ ಯುದ್ಧ ಪರಿಸ್ಥಿತಿಯಿಂದಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಅವರಿಗೆ ಉದ್ಯೋಗ ನಷ್ಟವಾಗದಿರಲಿ, ಕಳೆದುಕೊಂಡವರಿಗೆ ಮರು ಉದ್ಯೋಗ ದೊರಕಲಿ ಹಾಗೂ ಯುದ್ಧ ಶಮನವಾಗಿ ಎಲ್ಲರಿಗೂ ಕಲ್ಯಾಣವಾಗಲಿ ಎಂಬ ಮಹತ್ ಉದ್ದೇಶದಿಂದ ಆರಾಧ್ಯ ಮಾತೆ ಶ್ರೀ ಪಾಡಂಗರೆ ಭಗವತಿ ಅಮ್ಮನಲ್ಲಿ ಕ್ಷೇತ್ರದ ಪೂಜಾರಿಯವರಾದ ಶ್ರೀ ನಾರಾಯಣ ಭಗವತಿ ಪೂಜಾರಿಯವರು ಪ್ರಾರ್ಥನೆ ಮಾಡಿದರು.
ಕ್ಷೇತ್ರದ ಅನುವಂಶಿಕ ಅಚ್ಚಮಾರರು, ಸೇವಾ ಸಮಿತಿಯ ಅಧ್ಯಕ್ಷರಾದ ಜಯರಾಮ ಬಲ್ಲಂಗುಡೆಲು, ಸಮಿತಿಯ ಪದಾಧಿಕಾರಿಗಳು ಮತ್ತು ಶ್ರೀ ಪಾಡಂಗರೆ ಭಗವತಿ ಭಕ್ತವೃಂದ ಗಲ್ಫ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

0 Comments