Ticker

6/recent/ticker-posts

Ad Code

ಕ್ಯಾಮೆರಾ ಅಳವಡಿಸಿದ ಕನ್ನಡಕ ಧರಿಸಿ ಮತಗಟ್ಟೆಯಲ್ಲಿ ಕುಳಿತಿದ್ದ ಯುಡಿಎಫ್ ಅಭ್ಯರ್ಥಿಯ ಮುಖ್ಯ ಏಜೆಂಟ್ ಸೆರೆ

 

ಕಾಸರಗೋಡು : ಕ್ಯಾಮೆರಾ ಅಳವಡಿಸಿದ ಕನ್ನಡಕ ಧರಿಸಿ ಮತಗಟ್ಟೆಯಲ್ಲಿ ಕುಳಿತಿದ್ದ ಯುಡಿಎಫ್ ಅಭ್ಯರ್ಥಿಯ ಮುಖ್ಯ ಏಜೆಂಟ್ ನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಉದುಮ ವಿಧಾನ ಸಭೆ ಕ್ಷೇತ್ರದ ಕೆ.ನೀಲಕಂಠನ್ ಅವರ ಮುಖ್ಯ ಏಜೆಂಟ್, ವಕೀಲ ಬಿ.ಎಂ.ಜಮಾಲ್ ಎಂಬಾತನನ್ನು ಬೇಕಲ ಸಿಐ ನೇತೃತ್ವದಲ್ಲಿ ಬಂಧಿಸಲಾಗಿದೆ.

ಬೇಕಲ ಇಸ್ಲಾಮಿಯಾ ಎಎಲ್‌ಪಿ ಶಾಲೆಯ 165ನೇ ಬೂತ್ ನಲ್ಲಿ ಘಟನೆ ನಡೆದಿದೆ. ಜಮಾಲ್ ಧರಿಸಿದ್ದ ಕನ್ನಡಕದಲ್ಲಿ ಕ್ಯಾಮೆರಾ ಇರುವುದನ್ನು ಗಮನಿಸಿದ ಎಲ್‌ಡಿಎಫ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪ್ರಿಸೈಡಿಂಗ್ ಆಫೀಸರ್ ಮತ್ತು ಪೊಲೀಸರು ಜಮಾಲ್ ನ ಕನ್ನಡಕವನ್ನು ವಶಪಡಿಸಿಕೊಂಡಿದ್ದಾರೆ. ಬೂತ್‌ನಲ್ಲಿ ಸ್ವಲ್ಪ ಸಮಯದವರೆಗೆ ಸಂಘರ್ಷದ ಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಮತದಾನದ ಕೇಂದ್ರದೊಳಗೆ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಕ್ಯಾಮೆರಾಗಳನ್ನು ಕೊಂಡೊಯ್ಯುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಪೊಲೀಸರು ಆತನ ಕನ್ನಡಕವನ್ನು ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ. ಘಟನೆಯ ಬಗ್ಗೆ ಚುನಾವಣಾ ಆಯೋಗಕ್ಕೆ ವರದಿ ನೀಡಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಕ್ಫ್ ಮಂಡಳಿಯ ಕಾರ್ಯದರ್ಶಿಯೂ ಆಗಿರುವ ಜಮಾಲ್, "ಇದು ನಾನು ಸಾಮಾನ್ಯವಾಗಿ ಬಳಸುವ ಕನ್ನಡಕ. ಇದರಲ್ಲಿ ಕ್ಯಾಮೆರಾ ಇರುವುದು ನನ್ನ ಗಮನಕ್ಕೆ ಬಂದಿರಲಿಲ್ಲ" ಎಂದು ಸಮರ್ಥಿಸಿಕೊಂಡಿದ್ದಾರೆ.

Post a Comment

0 Comments