Ticker

6/recent/ticker-posts

Ad Code

ಎ.12ಕ್ಕೆ ಮೃದಂಗವಾದಕ ಕೀರ್ತಿಶೇಷ ಸದಾಶಿವ ಅನಂತಪುರ ಅವರ ಪಂಚಮ ಸ್ಮೃತಿ ಪ್ರಶಸ್ತಿ ಪ್ರದಾನ ಮತ್ತು ಕೃತಿ ಬಿಡುಗಡೆ


ಕುಂಬಳೆ : ಸದಾಶಿವ ಅನಂತಪುರ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಪ್ರಕೃತಿ ಯುವ ತಂಡ ಅನಂತಪುರ ಇದರ ಸಹಯೋಗದಲ್ಲಿ ಎ. 12ರಂದು ಭಾನುವಾರ ಅನಂತಪುರ ಕ್ಷೇತ್ರದ ಅನಂತಶ್ರೀ ಸಭಾಭವನದಲ್ಲಿ ಕೀರ್ತಿಶೇಷ ಮೃದಂಗವಾದಕ ಸದಾಶಿವ ಅನಂತಪುರ ಅವರ ಪಂಚಮ ಸ್ಮೃತಿ ಪ್ರಶಸ್ತಿ ಪ್ರದಾನ ಮತ್ತು ಅವರ ಪುತ್ರ ಸತ್ಯ ಶಂಕರ ಅನಂತಪುರ ಅವರ ಚೊಚ್ಚಲ ಕವನ ಸಂಕಲನ “ಬದುಕು-ಭಾವ-ಜೀವ” ಕೃತಿ ಬಿಡುಗಡೆ ನಡೆಯಲಿದೆ. ಮಧ್ಯಾಹ್ನ 2.30ರಿಂದ ನಡೆಯುವ ಸಮಾರಂಭದಲ್ಲಿ ನಾಡಿನ ಹಿರಿಯ ಚರ್ಮ ವಾದ್ಯ ತಯಾರಕ, ನಾದ ವಿಜ್ಞಾನಿ ಕೂಡ್ಲು ಸದಾನಂದ ರಾವ್ ಅವರಿಗೆ ಸ್ಮೃತಿ ಪುರಸ್ಕಾರ ಪ್ರದಾನವಾಗಲಿದೆ. ಸಮಾರಂಭವನ್ನು ಕ್ಷೇತ್ರದ ಅರ್ಚಕ ವೇ. ಮೂ. ಸುಬ್ರಹ್ಮಣ್ಯ ಭಟ್ ದೀಪಪ್ರಜ್ವಲನ ಮಾಡಿ ಉದ್ಘಾಟಿಸುವರು.

ಸತ್ಯಶಂಕರ ಅನಂತಪುರ ಅವರ “ಬದುಕು ಭಾವ ಜೀವ” ಚೊಚ್ಚಲ ಕವನ ಸಂಕಲನವನ್ನು ನಾಡಿನ ಹಿರಿಯ ಚಿಂತಕ, ಸಂಶೋಧಕ, ಮಾಜಿ ಕುಲಪತಿಗಳಾದ ಡಾ. ಚಿನ್ನಪ್ಪ ಗೌಡ ಬಿಡುಗಡೆ ಮಾಡುವರು. ಕವನ ಸಂಕಲನದ ಕುರಿತು ಕವಿ, ಲೇಖಕ ರಾಧಾಕೃಷ್ಣ ಉಳಿಯತ್ತಡ್ಕ ಮಾತನಾಡುವರು. ಹಿರಿಯ ಕವಿ, ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆಯಲ್ಲಿ ಸಮಾರಂಭ ಜರಗಲಿದ್ದು, ಮಂಗಳೂರು ಸುಬ್ರಹ್ಮಣ್ಯ ಸಭಾ ಅಧ್ಯಕ್ಷ ಡಾ.ಎ. ಪಿ ಕೃಷ್ಣ, ಕಾಸರಗೋಡು ಕೃಷ್ಣಾ ಆಸ್ಪತ್ರೆ ಸ್ಥಾಪಕರಾದ ಹಿರಿಯ ವೖದ್ಯೆ ಡಾ. ಟಿ. ಕೆ. ಯಶೋಧ, ನಿವೃತ್ತ ಪ್ರಾಂಶುಪಾಲ, ಚಿಂತಕ ಡಾ. ಬೇ. ಸಿ. ಗೋಪಾಲಕೃಷ್ಣ ಭಟ್, ಕ. ಸಾ. ಪ ಕಾಸರಗೋಡು ಜಿಲ್ಲಾಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಹಿರಿಯ ವೈದ್ಯ ಡಾ. ಎಸ್. ವಿ. ರಾಜಗೋಪಾಲ ಶರ್ಮ ವಿದ್ಯಾನಗರ, ಪ್ರಕೃತಿ ಯುವತಂಡ ಅನಂತಪುರ ಅಧ್ಯಕ್ಷ ಲೋಕಯ್ಯ ಸಿದ್ಧಿಬೈಲು ಉಪಸ್ಥಿತರಿರುವರು. ಸಮಾರಂಭದಲ್ಲಿ ಕು. ಕೀರ್ತನಾ ರಾವ್ ಕುಂಬಳೆ ಪ್ರಾಸ್ತಾವಿಕ ಮಾತನಾಡುವರು. ಕವಿ ಸತ್ಯಶಂಕರ ಅನಂತಪುರ ಕವಿ ನುಡಿ ಆಡುವರು. ಚೈತ್ರಾ ಸತ್ಯಶಂಕರ್ ಸ್ವಾಗತಿಸಿ, ಎಂ. ನಾ. ಚಂಬಲ್ತಿಮಾರ್ ಕಾರ್ಯಕ್ರಮ ನಿರೂಪಿಸುವರು.

Post a Comment

0 Comments