ಅಮೇರಿಕಾ : ಭಾರತದ ಆಧ್ಯಾತ್ಮಿಕ ಚೇತನ ಸ್ವಾಮಿ ವಿವೇಕಾನಂದರ ಅಪ್ರತಿಮ ಗೌರವಾರ್ಥವಾಗಿ ಅಮೇರಿಕಾದ ಸೀಟಲ್ ನಗರದ ಹೃದಯಭಾಗದಲ್ಲಿರುವ ವೆಸ್ಟ್‌ಲೇಕ್ ಸೈರ್‌ನಲ್ಲಿ ಅವರ ಮೊದಲ ಪೂರ್ಣಕಾಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಅಮೇರಿಕಾದ ನಗರ ಸರ್ಕಾರವೊಂದು ಅಧಿಕೃತವಾಗಿ ಆಯೋಜಿಸಿದ ಮೊದಲ ಪ್ರತಿಮೆ ಪ್ರತಿಷ್ಠಾಪನೆ ಇದಾಗಿದೆ ಎಂಬುದು ವಿಶೇಷ.
ಭಾರತೀಯ ಮೂಲದ ಶಿಲ್ಪಿ ನರೇಶ್ ಕುಮಾರ್ ಕುಮಾವತ್ ಕೆತ್ತಿದ ಈ ಪ್ರತಿಮೆಯನ್ನು ಸೀಟಲ್ ಮೇಯರ್ ಕೇಟಿ ವಿಲ್ಸನ್ ಮತ್ತು ಭಾರತೀಯ ಕಾನ್ಸುಲ್ ಜನರಲ್ ಪ್ರಕಾಶ್ ಗುಪ್ತಾ ಅವರು ಜಂಟಿಯಾಗಿ ಉದ್ಘಾಟಿಸಿದರು. ಈ ಘಟನೆಯು ಅನಿವಾಸಿ ಭಾರತೀಯರಲ್ಲಿ ಮತ್ತು ವಿವೇಕಾನಂದರ ಅನುಯಾಯಿಗಳಲ್ಲಿ ಭಾರಿ ಭಕ್ತಿ ಭಾವ ಮೂಡಿಸಿದೆ.

0 Comments