Ticker

6/recent/ticker-posts

Ad Code

ಕನ್ನಡ ಭವನದ ರೂವಾರಿ ಸಂಧ್ಯಾರಾಣಿ ಟೀಚರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ

 

ಕಾಸರಗೋಡು : ಕಥಾಬಿಂದು ಪ್ರಕಾಶನ, ಉಡುಪಿ ಶಿರೂರು ಶ್ರೀಮಠ, ಉಡುಪಿ ಶ್ರೀಕೃಷ್ಣ ಮಠ ಸಹಯೋಗದಲ್ಲಿ ಉಡುಪಿ ಶ್ರೀಮಠದ ಶ್ರೀರಮಣ ಆಚಾರ್ಯ ಅವರ ಸರ್ವಾಧ್ಯಕ್ಷತೆಯಲ್ಲಿ, ಉಡುಪಿ ಶ್ರೀಮಠದ ರಾಜಾಂಗಣದಲ್ಲಿ 'ಕಥಾಬಿಂದು ಸಾಹಿತ್ಯ ಸಮ್ಮೇಳನ'ವು ಜರಗಿತು. ಕಾರ್ಯಕ್ರಮದಲ್ಲಿ ಕನ್ನಡ ಭವನದ ರೂವಾರಿ ಸಂಧ್ಯಾರಾಣಿ ಟೀಚರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿರೂರು ಮಠ ವ್ಯವಸ್ಥಾಪಕ ಭಾಗವತ್, ಸರ್ವಾಧ್ಯಕ್ಷ ಶ್ರೀರಮಣ ಆಚಾರ್ಯ, ಹರಿಕೃಷ್ಣ ಪುನರೂರು ಸಂಧ್ಯಾರಾಣಿ ಟೀಚರ್ ಗೆ ಶಾಲು, ಸ್ಮರಣಿಕೆ, ಪ್ರಮಾಣಪತ್ರ, ಫಲತಾಂಬೂಲದೊಂದಿಗೆ 'ಉಡುಪಿ ಶ್ರೀಮಠದ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ' ಪ್ರದಾನ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ, ಡಾ. ಹರಿಕೃಷ್ಣ ಪುನಃರೂರು, ಕ. ಸಾ. ಪ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಅಧ್ಯಕ್ಷ, ಕಲ್ಕೂರ ಪ್ರತಿಷ್ಠಾನ ರೂವಾರಿ ಪ್ರದೀಪ್ ಕುಮಾರ್ ಕಲ್ಕೂರ, ಕಿನ್ನಿಗೋಳಿ ಭುವನಬಿರಾಮ ಉಡುಪ, ಕನ್ನಡ ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಸಂಚಾಲಕ, ಜಯಾನಂದ ಪೆರಾಜೆ, ಕನ್ನಡ ಚು. ಸಾ. ಪ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಕೊಳಚಪ್ಪೆ ಗೋವಿಂದ ಭಟ್, ಕಥಾಬಿಂದು ಪ್ರಕಾಶನ ರೂವಾರಿ ಪಿ. ವಿ. ಪ್ರದೀಪ್ ಕುಮಾರ್, ಕಾಸರಗೋಡು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಮುಖ್ಯ ಅತಿಥಿಗಳಾಗಿದ್ದರು.

ಸಂಧ್ಯಾ ರಾಣಿ ಟೀಚರ್ ಈಗಾಗಲೇ ಕರ್ನಾಟಕ ಸರಕಾರದ ಗಡಿ ಪ್ರದೇಶ ಪ್ರಾಧಿಕಾರದ ಗಡಿ ಚೇತನ ಪುರಸ್ಕಾರ, ಅಂತರ್ದೇಶೀಯ ಮಟ್ಟದಲ್ಲಿ ದುಬೈಯಲ್ಲಿ, ಕಾಸರಗೋಡು ಜಿಲ್ಲಾ ಮಹಿಳಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಇತ್ತೀಚಿಗೆ ಕರ್ನಾಟಕದ ಪ್ರತಿಷ್ಠಿತ ಹೊಯ್ಸಳ ಪ್ರಶಸ್ತಿ ಸಹಿತ ಹತ್ತಾರು ಪ್ರಶಸ್ತಿ, ಗೌರವಾದರಗಳಿಗೆ ಇವರು ಬಾಜನರಾಗಿದ್ದಾರೆ.

Post a Comment

0 Comments