ಬದಿಯಡ್ಕ : ಅಪ್ರಾಪ್ತ ಬಾಲಕರು ಚಲಾಯಿಸುತ್ತಿದ್ದ ಮೂರು ಸ್ಕೂಟರ್‌ಗಳನ್ನು ಬದಿಯಡ್ಕ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಾಲಕರ ತಂದೆ ಸೇರಿದಂತೆ ಮೂವರು ಸಂಬಂಧಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೆರ್ಲ ಎಂ.ಎಸ್. ಮಂಜಿಲ್‌ನ ಅಬ್ದುಲ್ ನಾಸರ್ (44), ಪುಂಡೂರು ಶಾಸ್ತಾಂಕೋಟೆಯ ಅಬ್ದುಲ್ ಸತ್ತಾರ್ (43) ಮತ್ತು ನಾರಂಪಾಡಿ ಉದ್ದಂಪಾರೆಯ ಮೊಹಮ್ಮದ್ ಹನೀಫಾ (41) ಇವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪಡ್ರೆ ಅಜಿನಡ್ಕದಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ವೇಳೆ 14 ವರ್ಷದ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ನಾರಂಪಾಡಿಯ ಮಾರ್ಪನಡ್ಕ ರಸ್ತೆ ಜಂಕ್ಷನ್‌ನಲ್ಲಿ ಇತರ ಎರಡು ಸ್ಕೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

0 Comments