Ticker

6/recent/ticker-posts

Ad Code

ಗ್ಯಾಸ್ ಸಿಲಿಂಡರ್‌ಗಾಗಿ ಕೆವೈಸಿ ಅಪ್ಡೇಟ್ ಮಾಡುವ ನೆಪದಲ್ಲಿ ಅನಾಮಧೇಯ ಕರೆ : ಲಕ್ಷಾಂತರ ರೂ. ವಂಚನೆ

ಉಡುಪಿ: ಗ್ಯಾಸ್‌ ಅಭಾವದ ಲಾಭ ಪಡೆದ ಸೈಬರ್ ವಂಚಕರು ಲಕ್ಷ ಲಕ್ಷ ರೂ. ಹಣ ವಂಚಿಸಿರುವ ಪ್ರಕರಣ ನಡೆದಿದ್ದು, ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ. ಸೈಬರ್ ಕ್ರಿಮಿನಲ್‌ಗಳು ಗ್ಯಾಸ್ ಸಿಲಿಂಡರ್‌ಗಾಗಿ ಕೆವೈಸಿ ಅಪ್ಡೇಟ್ ಮಾಡಿ ಎಂದು ಏಜೆನ್ಸಿ ಹೆಸರಲ್ಲಿ ಅಪರಿಚಿತ ನಂಬರ್‌ನಿಂದ ಕರೆ ಮಾಡುತ್ತಾರೆ. ಬಳಿಕ ವಾಟ್ಸಪ್‌ ಗೆ ಎಪಿಕೆ ಫೈಲ್ ಕಳಿಸುತ್ತಾರೆ. ಫೈಲ್ ಡೌನ್ಲೋಡ್ ಮಾಡಿದರೆ ಫೋನ್ ಹ್ಯಾಕ್ ಆಗುತ್ತದೆ. ಬಳಿಕ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಪಡೆದು ವಂಚನೆ ಮಾಡುತ್ತಾರೆ. ಉಡುಪಿಯಲ್ಲಿ ಇದೇ ರೀತಿಯ ಎರಡು ಪ್ರಕರಣ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಒಂದು ಪ್ರಕರಣದಲ್ಲಿ 1.5 ಲಕ್ಷ ರೂ, ಇನ್ನೊಂದು ಪ್ರಕರಣದಲ್ಲಿ 6 ಲಕ್ಷ ರೂ. ಗೂ ಹೆಚ್ಚು ಹಣ ಬ್ಯಾಂಕ್ ಖಾತೆಯಿಂದ ಹೋಗಿದೆ. ಹಳೆಯ ರೇಟಿನಲ್ಲಿಯೇ ಬೇಗ ಸಿಲಿಂಡರ್ ಕೊಡುತ್ತೇವೆ ಎಂದು ಫೇಕ್ ವೆಬ್‌ಸೈಟ್‌ ಮೂಲಕ ವಂಚಿಸುತ್ತಾರೆ. ಕೆವೈಸಿ ಬಗ್ಗೆ ಯಾವುದೇ ತರಾತುರಿ ಬೇಡ. ಸರ್ಕಾರ ಹೊಸ ಆದೇಶ ಮಾಡಿಲ್ಲ. ಈ ಹಿಂದೆ ಮಾಡಿರುವ ಆದೇಶ ಜಾರಿಯಲ್ಲಿದೆ. ಎಪಿಕೆ ಫೈಲ್‌ಗಳು ಅಪಾಯಕಾರಿ ಎಂದು ಅವರು ಹೇಳಿದ್ದಾರೆ. ಜನ ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಎಪಿಕೆ ಫೈಲ್ ಡೌನ್ಲೋಡ್ ಮಾಡಬಾರದು. ಅನಾಮಧೇಯ  ಕರೆ ಬಂದರೆ, ವಂಚನೆಯಾದರೆ ತಕ್ಷಣ ಪೊಲೀಸ್‌ ಠಾಣೆಗೆ ಹೋಗಿ ಮಾಹಿತಿ ನೀಡಿ. ಒಂದು ಗಂಟೆ ಒಳಗೆ ಗೋಲ್ಡನ್ ಪಿರಿಯಡ್‌ನಲ್ಲಿ ಹೇಳಿದರೆ ಕ್ರಮ ಕೈಗೊಳ್ಳಬಹುದು. ಇಲ್ಲದಿದ್ದಲ್ಲಿ ಸೈಬರ್ ಕ್ರೈಂ ಟ್ರೇಸ್ ಮಾಡುವುದು ಸವಾಲಾಗಿದೆ ಎಂದು ಸಲಹೆ ನೀಡಿದ್ದಾರೆಂದು  ತಿಳಿದುಬಂದಿದೆ.

Post a Comment

0 Comments