ಕಾಸರಗೋಡು: ಎನ್‌ಡಿಎ ಕಾಸರಗೋಡು ವಿಷನ್ 2031ರ ಅಭಿವೃದ್ಧಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಎನ್‌ಡಿಎ ಜಿಲ್ಲಾ ಕಚೇರಿಯಲ್ಲಿ ನಡೆದ ಎನ್‌ಡಿಎ ಕಾಸರಗೋಡು ಮಂಡಲ ಸಮಾವೇಶದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಭಿವೃದ್ಧಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದರು. ನಾಲ್ಕು ದಶಕಗಳಿಂದ ಕಾಸರಗೋಡು ಕ್ಷೇತ್ರವನ್ನು ನಿರಂತರವಾಗಿ ಪ್ರತಿನಿಧಿಸುತ್ತಿರುವ ಮುಸ್ಲಿಂ ಲೀಗ್ ತನ್ನ ಜನಪ್ರತಿನಿಧಿಗಳು ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ವಿಫಲರಾಗಿದ್ದಾರೆಂದು ಅರಿತುಕೊಂಡಿದೆ. ಈ ಕಾರಣದಿಂದ ಪ್ರಸ್ತುತ ಅಭ್ಯರ್ಥಿಯನ್ನು ಬದಲಾಯಿಸಲಾಗಿದೆ ಎಂದು ಹರೀಶ್ ಪೂಂಜ ಹೇಳಿದರು.
ಎನ್ ಡಿಎ ಮಂಡಲ ಘಟಕ ಸಂಚಾಲಕ ರವೀಶ್ ತಂತ್ರಿ ಕುಂಟಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ, ಬಿ.ಡಿ.ಜೆ.ಎಸ್ ಜಿಲ್ಲಾಧ್ಯಕ್ಷ ಗಣೇಶ್ ಪಾರೆಕಟ್ಟ, ನ್ಯಾ. ಎ.ಸಿ ಅಶೋಕ್ ಕುಮಾರ್, ಎಸ್.ಜೆ.ಡಿ. ಜಿಲ್ಲಾಧ್ಯಕ್ಷ ಎಂ.ಕೆ.ರಾಮಚಂದ್ರ ಆಚಾರಿ, ಎಲ್ ಜೆಪಿ ಜಿಲ್ಲಾಧ್ಯಕ್ಷ ಎ.ಅರವಿಂದಾಕ್ಷನ್, ಶಿವಸೇನೆ ಜಿಲ್ಲಾಧ್ಯಕ್ಷ ಜಯರಾಜನ್, ಬಿಜೆಪಿ ರಾಜ್ಯ ಪರಿಷತ್ ಸದಸ್ಯರಾದ ಬಿ.ರವೀಂದ್ರನ್, ಎನ್.ಸತೀಶನ್, ಶಿವಕೃಷ್ಣ ಭಟ್, ಜಿಲ್ಲಾ ಉಪಾಧ್ಯಕ್ಷ ಪಿ.ರಮೇಶ್, ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರ ಕೋಟೆಕಣಿ, ಶಿವಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ನಾಯರ್, ಕಾಮರಾಜ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣಕುಮಾರ್ ಮಾತನಾಡಿದರು.

0 Comments