ಕಾಸರಗೋಡು : ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅಪ್ರಾಪ್ತ ಬಾಲಕಿಯೋರ್ವೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ 25 ವರ್ಷದ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮನೆಯಲ್ಲಿ ಮಲಗಿದ್ದಾಗ 16 ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸ್ನೇಹಾ ಮೆರ್ಲಿನ್ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ವಿಭಾಗದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೇ ಆರೋಪಿಯ ವಿರುದ್ಧ ಸಹೋದರ ಸಹೋದರಿಯರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸೇರಿದಂತೆ ನಾಲ್ಕು ಕೇಸುಗಳಿವೆ ಎಂದು ಮೇಲ್ಪರಂಬ ಪೊಲೀಸರು ತಿಳಿಸಿದ್ದಾರೆ. ಸ್ನೇಹಾ ಮೆರ್ಲಿನ್, ಈ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಹುಡುಗಿಯೊಬ್ಬಳ ತಾಯಿಯ ಸ್ನೇಹಿತೆಯಾಗಿದ್ದು, ಒಂದು ದಿನ ಬಾಲಕಿಯ ಮನೆಗೆ ಬಂದ ಆರೋಪಿಯು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ. ಭಯದಿಂದಾಗಿ ಬಾಲಕಿ ಘಟನೆಯ ಬಗ್ಗೆ ಯಾರಿಗೂ ಹೇಳಲಿಲ್ಲ. ಆಕೆಗೆ ಕೌನ್ಸೆಲಿಂಗ್ ನೀಡಿದಾಗ ಘಟನೆ ಬೆಳಕಿಗೆ ಬಂದಿತು. ನಂತರ ಪೊಲೀಸರು ಪೋಕ್ಸೋ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದರು. ತಲಿಪರಂಬದಲ್ಲಿ ಸಿಪಿಐ ನಾಯಕ ಕೋಮತ್ ಮುರಳಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸ್ನೇಹಾ ಮೆರ್ಲಿನ್ ಕೂಡ ಆರೋಪಿಯಾಗಿದ್ದಾಳೆ ಎಂದು ತಿಳಿದು ಬಂದಿದೆ.

0 Comments