Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಜೂ. 18ರಿಂದ ಆನೆಗುಂದಿ ಶ್ರೀಗಳಿಂದ ಚಾತುರ್ಮಾಸ್ಯ ವ್ರತ ಸಂಕಲ್ಪಯಾತ್ರೆ ಆರಂಭ

ಪಡುಕುತ್ಯಾರು : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರ 22ನೇ ವರ್ಷದ ಪರಾಭವ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯು ಜು. 29ರಿಂದ ಸೆ. 26ರವರೆಗೆ ಪಡುಕುತ್ಯಾರಿನ ಮಠದಲ್ಲಿ ನಡೆಯಲಿದ್ದು ಪೂರ್ವಭಾವಿಯಾಗಿ ಜೂ. 18ರಿಂದ ಜು. 26ರ ವರೆಗೆ ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಶ್ರೀ ಬಾಲಸರಸ್ವತೀ ಹೋಮ, ಆಶೀರ್ವಚನ ಹಾಗೂ ಅನುಗ್ರಹ ಮಂತ್ರಾಕ್ಷತೆ ವಿತರಣೆ ನಡೆಯಲಿದೆ.

ಜೂ. 18ರಂದು ಧಾರವಾಡ, ಜೂ. 19ರಂದು ಹೊಸಪೇಟೆ, ಜೂ. 21ರಂದು ನವಿಮುಂಬಯಿ, ಜೂ.24ರಂದು ಹುಬ್ಬಳ್ಳಿ, ಜೂ. 25ರಂದು ಆನೆಗುಂದಿ, ಜೂ. 28ರಂದು ಬಾರ್ಕೂರು, 5ರಂದು ಉಪ್ಪಳ್ಳಿ, ಜು. 10ರಂದು ಮೂಡುಬಿದಿರೆ ಹಾಗೂ ನೆಕ್ಲಾಜೆ, ಜು. 12ರಂದು ಅಂಕೋಲಾ, ಗೋಕರ್ಣ ಮತ್ತು ಭಟ್ಕಳ, ಜು. 16ರಂದು ಕೊಲಕಾಡಿ, ಹಳೆಯಂಗಡಿ ಹಾಗೂ ಪಡುಪಣಂಬೂರು, ಜು. 9ರಂದು ಕೋಟೆಕಾರು-ನೆಲ್ಲಿಸ್ಥಳ, ಬಂಗ್ರಮಂಜೇಶ್ವರ, ಕುಂಬಳೆ, ಮಧೂರು ಹಾಗೂ ಕಾಞಂಗಾಡ್, ಜು. 24ರಂದು ಮಂಗಳೂರು, ಹಾಗೂ ಜು. 26ರಂದು ಕಾಪು ಮತ್ತು ಕಟಪಾಡಿ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಜು. 26ರಂದು ಕಾಪು ಮತ್ತು ಕಟಪಾಡಿಯಲ್ಲಿ ನಡೆಯುವ ಕಾರ್ಯಕ್ರಮಗಳೊಂದಿಗೆ ಸಂಕಲ್ಪ ಯಾತ್ರೆ ಸಮಾಪ್ತಿಗೊಳ್ಳಲಿದೆ ಎಂದು ಚಾತುರ್ಮಾಸ ವ್ರತ ನಿರ್ವಹಣ ಸಮಿತಿ ಗೌರವಾಧ್ಯಕ್ಷ ಪಿ.ವಿ. ಗಂಗಾಧರ ಆಚಾರ್ಯ, ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Post a Comment

0 Comments


ಜಾಹೀರಾತು

Responsive Advertisement