Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

11 ಕೋಟಿ ಮೌಲ್ಯದ ಹೈಡ್ರೋಪೋನಿಕ್ಸ್ ಗಾಂಜಾ ಸಮೇತ ಕೇರಳದ ಮಿಸೆಸ್ ಕೇರಳ ಸೌಂದರ್ಯ ಸ್ಪರ್ಧೆಯ ಮಾಜಿ ಸ್ಪರ್ಧಾರ್ಥಿಯ ಬಂಧನ

 

ಮುಂಬೈ: ಸುಮಾರು 11 ಕೋಟಿ ಮೌಲ್ಯದ ಹೈಡ್ರೋಪೋನಿಕ್ಸ್ ಗಾಂಜಾವನ್ನು ಬ್ಯಾಂಕಾಕ್‌ನಿಂದ ಭಾರತಕ್ಕೆ ಸಾಗಿಸುತ್ತಿದ್ದ ಆರೋಪದ ಮೇಲೆ ಮಿಸೆಸ್ ಕೇರಳ ಸೌಂದರ್ಯ ಸ್ಪರ್ಧೆಯ ಮಾಜಿ ಸ್ಪರ್ಧಾರ್ಥಿ ಮಾಡೆಲ್‌ ಹರ್ಷ ಸನ್ನಿ (28)  ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಗಾಂಜಾ ಸಮೇತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. 

ಏರ್ ಇಂಟೆಲಿಜೆನ್ಸ್ ಯೂನಿಟ್  ನೀಡಿದ ಪ್ರಕಾರ, ಮಾಡೆಲ್‌ ಹರ್ಷ ಸನ್ನಿ ಜೂನ್ 10-11ರ ರಾತ್ರಿ ಬ್ಯಾಂಕಾಕ್‌ನಿಂದ ಏರ್ ಇಂಡಿಯಾ ವಿಮಾನ TG-351 ಮೂಲಕ ಮುಂಬೈನ ಶಿವಾಜಿ ಏರ್‌ಪೋರ್ಟ್‌ಗೆ ಬಂದಿಳಿದಿದ್ದರು. ಅನುಮಾನದ ಮೇಲೆ ಆಕೆಯನ್ನು ತಡೆಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ಆಕೆಯ ಲಗೇಜ್‌ ಬ್ಯಾಗ್‌ಗಳನ್ನು ಶೋಧಿಸುವ ವೇಳೆ ಸುಮಾರು 12 ಪ್ಯಾಕೆಟ್‌ ಕವರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 

ಆ ಪ್ಯಾಕೆಟ್‌ಗಳನ್ನು ತೆರೆದಾಗ ಹಸಿರು ಬಣ್ಣದ ವಸ್ತುಗಳು ಪತ್ತೆಯಾಗಿವೆ. ಪರಿಶೀಲಿಸಿದ ನಂತರ ಅದು ಹೈಡ್ರೋಪೋನಿಕ್ಸ್ ಗಾಂಜಾ ಎಂಬುದನ್ನು ಅಧಿಕಾರಿಗಳು ಪತ್ತೆಮಾಡಿದ್ದಾರೆ. ವಶಪಡಿಸಿಕೊಂಡ ಅಕ್ರಮ ವಸ್ತುಗಳ ಅಂದಾಜು ಮೌಲ್ಯ 11.82 ಕೋಟಿ ರೂ.ಗಳಿಗೂ ಹೆಚ್ಚು ಎಂದು ಅಂದಾಜಿಸಿದ್ದಾರೆ.

ಹೈಡ್ರೋಪೋನಿಕ್ಸ್ ಗಾಂಜಾ ವಶಪಡಿಸಿಕೊಂಡ ಬಳಿಕ ಹರ್ಷ ಸನ್ನಿ ಅವರನ್ನು ಬಂಧಿಸಲಾಯಿತು. ನಂತರ ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.   ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಹರ್ಷ ಸನ್ನಿ 2025 ರಲ್ಲಿ ಮಿಸೆಸ್‌ ಕೇರಳ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಪ್ರಸಿದ್ಧಿಗೆ ಬಂದಿದ್ದರು.

Post a Comment

0 Comments


ಜಾಹೀರಾತು

Responsive Advertisement