Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಜೂನ್ 8, 9ರಂದು ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರ ದೃಢಕಲಶ

ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಬ್ರಹ್ಮಕಲಶೋತ್ಸವವು ಅಭೂತಪೂರ್ವವಾಗಿ ನಡೆದಿದ್ದು ಇದರ ಅಂಗವಾಗಿ ಜೂನ್ 8, 9ರಂದು ದೃಢ ಕಲಶ ಕಾರ್ಯಕ್ರಮ ಜರಗಲಿದೆ.  ಸಂದರ್ಭದಲ್ಲಿ  ಶ್ರೀಮದ್ ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಆಚಾರ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ಶ್ರೀದೇವರಿಗೆ ದೃಢಕಲಶ, 108 ಸೀಯಾಳಾಭಿಷೇಕ, ಲೋಕ ಕಲ್ಯಾಣಾರ್ಥವಾಗಿ ಶ್ರೀ ಮಹಾರುದ್ರಯಾಗ ಹಾಗೂ ಶ್ರೀ ರಂಗಪೂಜೆ ಕಾರ್ಯಕ್ರಮಗಳು ನಡೆಯಲಿರುವುದು. ಕಾರ್ಯಕ್ರಮದಂಗವಾಗಿ ಜೂ.8 ರಂದು ಸಂಜೆ 7ಕ್ಕೆ ಪುಣ್ಯಾಹವಾಚನ, ಪ್ರಸಾದ ಶುದ್ದಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ ಜರಗಲಿದೆ. ಜೂ. 9ರಂದು ಬೆಳಗ್ಗೆ  7 ಗಂಟೆಗೆ ಗಣಪತಿ ಹವನ ಕಲಶಪೂಜೆ, ಕಲಶಾಭಿಷೇಕ ಬೆಳಗ್ಗೆ 9.30ಕ್ಕೆ ಶ್ರೀ ಮಹಾರುದ್ರಯಾಗ ಆರಂಭ, ಮಧ್ಯಾಹ್ನ 12ಕ್ಕೆ ಶ್ರೀ ಮಹಾರುದ್ರಯಾಗ ಪೂರ್ಣಾಹುತಿ, ಮಧ್ಯಾಹ್ನ 12.30 : ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ಪ್ರಸಾದ, ಅಪರಾಹ್ನ 2.30ರಿಂದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಮತ್ತು ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಕೃಷ್ಣರಾಜ ಬಲ್ಲಾಲ್ ಕೊಡ್ಯಮೆ ಅರಮನೆ, ಕ್ಷೇತ್ರ ಆಡಳಿತ ಮೊಕೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಬ್ರಹ್ಮಕಲಶೋತ್ಸವ ಗೌರವಾಧ್ಯಕ್ಷ ಜಯದೇವ ಖಂಡಿಗೆ ಬ್ರಹ್ಮಕಲಶೋತ್ಸವ ಸಮಿತಿ ಪ್ರ. ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು, ಮೋಕ್ತೆಸರರಾದ ಸೀತಾರಾಮ ನವಕಾನ, ಕೃಷ್ಣ ಬದಿಯಡ್ಕ, ಕೋಶಾಧಿಕಾರಿ ಸೂರ್ಯನಾರಾಯಣ ಬಿ., ರಕ್ಷಾಧಿಕಾರಿ ಕೃಷ್ಣಮೂರ್ತಿ ಪುದುಕೋಳಿ, ಉದಯಶಂಕರ ಪಿ.ಎಸ್., ಗಣೇಶ್ ಪ್ರಸಾದ ಕಡಪ್ಪು, ಡಾ. ಶ್ರೀಶಕುಮಾರ್ ಪಂಜಿತ್ತಡ್ಕ, ಭಾಸ್ಕರ ಪಂಜಿತ್ತಡ್ಕ ಮೊದಲಾದವರು ಭಾಗವಹಿಸುವರು. ರಾತ್ರಿ 7.30 ಗಂಟೆಗೆ ಶ್ರೀ ದೇವರಿಗೆ ರಂಗಪೂಜೆ, ಪ್ರಸಾದ, ಭೋಜನ ಪ್ರಸಾದ ವಿತರಣೆ ನಡೆಯಲಿದೆ.

Post a Comment

0 Comments


ಜಾಹೀರಾತು

Responsive Advertisement