Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಯರ್ ಕಟ್ಟೆ ಸರಕಾರಿ ಉನ್ನತ ಪ್ರೌಢ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದಿಂದ ಎಸ್.ಎಸ್.ಎಲ್.ಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಪೈವಳಿಕೆ : ಇಲ್ಲಿನ ಸರಕಾರಿ ಉನ್ನತ ಪ್ರೌಢ ಶಾಲೆ ಪೈವಳಿಕೆ ಕಾಯರ್ ಕಟ್ಟೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತ ಮೂರನೇ ಬಾರಗೆ ನೂರು ಶೇಕಡಾ (100%) ಫಲಿತಾಂಶ ದಾಖಲಿಸಲು ಕಾರಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸುವ ಅಪೂರ್ವ 'ಪ್ರತಿಭಾ ಪುರಸ್ಕಾರ' ಕಾರ್ಯಕ್ರಮವು ಇತ್ತೀಚೆಗೆ ಜರುಗಿತು.

​ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ  ಎಲ್ಲಾ ವಿಷಯಗಳಲ್ಲಿ 'ಎ ಪ್ಲಸ್' ಗಳಿಸಿದ ವಿದ್ಯಾರ್ಥಿಗಳಾದ ಜಯಶ್ರೀ ಪಿ., 9 ವಿಷಯಗಳಲ್ಲಿ 'ಎ ಪ್ಲಸ್' ಗಳಿಸಿದ ಸಮನ್ವಿ ಎಂ. ಜಿ., ಧನುಷ್ ಡಿ. ಆರ್. ಹಾಗೂ 8 ವಿಷಯಗಳಲ್ಲಿ 'ಎ ಪ್ಲಸ್' ಗಳಿಸಿದ ಯಶ್ವಿತಾ ಮತ್ತು ರೋಹಿತ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ  ರಾಘವ ಚೇರಾಲ್, ಖಾದರ್ ಹಾಜಿ ಹಾಗೂ  ರವೀಂದ್ರ ಪಾವಲ್‌ಕೋಡಿ ಅವರು ಪ್ರಾಯೋಜಿಸಿದ ನಗದು ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.

​ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿ. ಕಾಡೂರು ಕೃಷ್ಣ ಭಟ್ ದತ್ತಿನಿಧಿ ಬಹುಮಾನವನ್ನು ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀನಿವಾಸ ಭಟ್ ಅವರು ವಿತರಿಸಿದರು. ​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಪ್ರಾಂಶುಪಾಲರಾದ  ಪಿ. ಎನ್. ಮೂಡಿತ್ತಾಯ ಅವರು ಮಾತನಾಡಿ, "ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ತಮಗೆ ಅಕ್ಷರ ಕಲಿಸಿದ ಶಾಲೆಯನ್ನು ಎಂದಿಗೂ ಮರೆಯಬಾರದು ಹಾಗೂ ಗುರು-ಹಿರಿಯರನ್ನು ಸದಾ ಗೌರವಿಸಬೇಕು" ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ​ಶಾಲಾ ಪ್ರಾಂಶುಪಾಲರಾದ  ಡೊಮಿನಿಕ್ ಆಗಸ್ತಿನ್, ಮುಖ್ಯೋಪಾಧ್ಯಾಯಿನಿ  ಭಾಗ್ಯಲಕ್ಷ್ಮೀ ಹಾಗೂ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ನಿಟ್ಟೋನಿ ವೈದ್ಯರ್ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ ಶುಭಾಶಂಸನೆಗೈದರು.

​ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ  ರಾಘವ ಚೇರಾಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಎಂ. ಎಸ್. ಸ್ವಾಗತಿಸಿ, ಅಶ್ವತ್ಥ್ ಲಾಲ್‌ಬಾಗ್ ವಂದಿಸಿದರು. ಹರೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಶಿಕ್ಷಕ ವೃಂದ, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Post a Comment

0 Comments



ಜಾಹೀರಾತು

Responsive Advertisement