Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಸ್ಕೂಟಿಯಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ಧರ್ಮಸ್ಥಳ ಸಂಘದ ನಗದು ಸಹಾಯಕಿಯ ಎರಡೂವರೆ ಪವನಿನ ಚಿನ್ನದ ಸರ ಕಸಿದು ಪರಾರಿ


ಮಂಜೇಶ್ವರ : ಸ್ಕೂಟಿಯಲ್ಲಿ ಹೆಲ್ಮೆಟ್ , ರೈನ್ ಕೋಟು ಧರಿಸಿ ಬಂದ ಅಪರಿಚಿತರಿಬ್ಬರು ದಾರಿ ಕೇಳುವ ನೆಪದಲ್ಲಿ ಯುವತಿಯೋರ್ವಳ ಎರಡೂವರೆ ಪವನಿನ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ಇಂದು ಸಂಜೆ ಮೂರು ಗಂಟೆಗೆ ಹೊಸಂಗಡಿಯ ಸರ್ವೀಸ್ ರಸ್ತೆಯಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಗದು ಸಂಗ್ರಹ ಸಹಾಯಕಿಯಾದ ನಯನ ಎಂಬವರು ಕೆಲಸ ಮುಗಿಸಿ ತಮ್ಮ ಮನೆಗೆ ಮಧ್ಯಾಹ್ನ ಊಟಕ್ಕೆ ತೆರಳುವ ವೇಳೆ ಇಬ್ಬರು ಅಪರಿಚಿತರು ವಾಮಂಜೂರು ಭಾಗದಿಂದ ಬಂದು ಕಡಂಬಾರಿಗೆ ದಾರಿ ಯಾವುದೆಂದು ವಿಚಾರಿಸಿದ್ದು ತಿಳಿಸುವ ನಡುವೆ ಒಬ್ಬಾತ ನಯನ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿದ್ದು ತಬ್ಬಿಬ್ಬಾದ ಯುವತಿ ಬೊಬ್ಬಿಡುವ ವೇಳೆ  ಪುನಃ ಸವಾರರು ವಾಮಾಂಜೂರು ಭಾಗಕ್ಕೆ ವೇಗವಾಗಿ ತೆರಳಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಂಜೇಶ್ವರ ಪೋಲಿಸ್ ಠಾಣೆಗೆ ದೂರು ನೀಡಲಾಗಿದ್ದು ಪೋಲಿಸರು ಸಿಸಿಟಿವಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

Post a Comment

0 Comments



ಜಾಹೀರಾತು

Responsive Advertisement