Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಇನ್ಫ್ಲುಯೆನ್ಸರ್ ಗಳಾದ ಮೂವರು ಸಹೋದರಿಯರು ತಮ್ಮ ಕ್ಯಾಮೆರಾಮನನ್ನೇ ವರಿಸಿದ ಅಪರೂಪದ ವಿವಾಹ


ಉತ್ತರ ಪ್ರದೇಶ : ಪರಸ್ಪರ ದೂರವಾಗಿ ಬದುಕಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಮೂವರು ಸಹೋದರಿಯರು ಒಬ್ಬನೇ ಯುವಕನನ್ನು ವಿವಾಹವಾಗಿರುವ ಅಪರೂಪದ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ದೌರಿಯಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್ ಗಳಾದ ಸರೋಜ (20), ಸಾವಿತ್ರಿ ರಾಣಿ (19) ಹಾಗೂ ಅವರ ಸಂಬಂಧಿ ಸಂತೋಷ್(18) ಅವರು ತಮ್ಮ ವಿಡಿಯೊಗಳನ್ನು ಚಿತ್ರೀಕರಿಸುತ್ತಿದ್ದ ಕ್ಯಾಮೆರಾಮನ್ ವಿಕಾಸ್ ಖಟಕ್‌ವಂಶಿ (20) ಅವರನ್ನು ವಿವಾಹವಾಗಿದ್ದಾರೆ.

ವಿಕಾಸ್ ಈ ಮೂವರ ಸಾಮಾಜಿಕ ಜಾಲತಾಣದ ವಿಡಿಯೊಗಳನ್ನು ಚಿತ್ರೀಕರಿಸುತ್ತಿದ್ದು, ಕೆಲವು ವಿಡಿಯೊಗಳಲ್ಲಿ ಅವರ ಪತಿಯಾಗಿ ನಟಿಸುತ್ತಿದ್ದರು. ಈ ನಡುವೆ ಮನೆಯವರು ಪ್ರತ್ಯೇಕವಾಗಿ ಮದುವೆ ನಿಶ್ಚಯಿಸಲು ಮುಂದಾದಾಗ, ಪರಸ್ಪರ ದೂರವಾಗಬೇಕಾಗುತ್ತದೆ ಎಂಬ ಭಯದಿಂದ ಮೂವರು ಒಂದೇ ವ್ಯಕ್ತಿಯನ್ನು ವಿವಾಹವಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬಾಲ್ಯದಿಂದಲೂ ಒಟ್ಟಿಗೆ ಬೆಳೆದ ನಾವು ಬೇರ್ಪಟ್ಟು ಬದುಕುವುದನ್ನು ಊಹಿಸಲೂ ಸಾಧ್ಯವಿಲ್ಲ. ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುವುದಕ್ಕಿಂತ ಒಬ್ಬನೇ ವ್ಯಕ್ತಿಯನ್ನು ವಿವಾಹವಾಗುವುದು ಉತ್ತಮ ಎಂದು ತೀರ್ಮಾನಿಸಿದ್ದೇವೆ ಎಂದು ಸರೋಜ್ ತಿಳಿಸಿದ್ದಾರೆ. ತಾವೆಲ್ಲರೂ ಪ್ರಾಪ್ತವಯಸ್ಕರಾಗಿದ್ದು, ಸ್ವಇಚ್ಛೆಯಿಂದಲೇ ಈ ನಿರ್ಧಾರ ಕೈಗೊಂಡಿದ್ದೇವೆ ಎಂದೂ ಅವರು ಹೇಳಿದ್ದಾರೆ.

ಚಾಮುಂಡಾ ಮಾತಾ ದೇವಸ್ಥಾನದಲ್ಲಿ ನಡೆದ ಈ ವಿವಾಹದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಘಟನೆ ಬಹಿರಂಗವಾಗಿದೆ. ವಿಡಿಯೊದಲ್ಲಿ ವಿಕಾಸ್ ಮೂವರಿಗೂ ಸಿಂಧೂರ ಹಚ್ಚುತ್ತಿರುವ ದೃಶ್ಯಗಳು ಕಂಡುಬಂದಿವೆ. ಆದರೆ, ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬಗಳ ಸದಸ್ಯರು ಭಾಗವಹಿಸಿಲ್ಲ ಎಂದು ತಿಳಿದುಬಂದಿದೆ. ಆದರೆ ಹಿಂದೂ ವಿವಾಹ ಕಾಯ್ದೆ ಪ್ರಕಾರ ಈ ರೀತಿಯ ವಿವಾಹಗಳಿಗೆ ಕಾನೂನುಬದ್ಧ ಮಾನ್ಯತೆ ಇಲ್ಲ ಎಂದು ಕಾನೂನು ತಜ್ಞರು ಸ್ಪಷ್ಟಪಡಿಸಿದ್ದಾರೆ.


*ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್*


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement