Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಂಚಿಕಟ್ಟೆಯಲ್ಲಿ ವಸುಧಾ ಸ್ವ-ಸಹಾಯ ಸಂಘದ 5ನೇ ವಾರ್ಷಿಕೋತ್ಸವ ಆಚರಣೆ


 ​ಕುಂಬಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಮಂಜೇಶ್ವರ ತಾಲೂಕು, ಕುಂಬಳೆ ವಲಯದ ಕಂಚಿಕಟ್ಟೆ ಒಕ್ಕೂಟದ ‘ವಸುಧಾ’ ಸ್ವ-ಸಹಾಯ ಸಂಘದ 5ನೇ ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

​ಕಾರ್ಯಕ್ರಮದಲ್ಲಿ ಸಂಘದ ಸುದೀರ್ಘ 5 ವರ್ಷಗಳ ಯಶಸ್ವಿ ಪ್ರಯಾಣದಲ್ಲಿ ಯೋಜನೆಯಿಂದ ಸದಸ್ಯರಿಗೆ ದೊರೆತ ವಿವಿಧ ಸೌಲಭ್ಯಗಳು, ಪ್ರಯೋಜನಗಳು ಹಾಗೂ ಅನುದಾನ ಕಾರ್ಯಕ್ರಮಗಳ ಕುರಿತಾದ ಸಮಗ್ರ ಪ್ರಗತಿ ವರದಿಯನ್ನು ಮಂಡಿಸಲಾಯಿತು.ಇದೇ ಸಂದರ್ಭದಲ್ಲಿ ಸಂಘದ ಸದಸ್ಯರು ಹಾಗೂ ಅವರ ಮಕ್ಕಳು ಕವಿತೆ, ಜಾನಪದ ಹಾಡುಗಳು, ಭಕ್ತಿಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.ಕಾರ್ಯಕ್ರಮದಲ್ಲಿ ಕುಂಬಳೆ ವಲಯದ ಮೇಲ್ವಿಚಾರಕರಾದ ಅಭಿಷೇಕ್ ಡಿ., ಕಂಚಿಕಟ್ಟೆ ಒಕ್ಕೂಟದ ಉಪಾಧ್ಯಕ್ಷೆ ವೀಣಾ, ಸೇವಾಪ್ರತಿನಿಧಿ ಸಂಧ್ಯಾ ಹಾಗೂ ಸಂಘದ ಎಲ್ಲಾ ಸದಸ್ಯರು ಮತ್ತು ಅವರ ಮಕ್ಕಳು ಉಪಸ್ಥಿತರಿದ್ದರು. 


ಈ ಸಂದರ್ಭದಲ್ಲಿ ಸ್ವ ಸಹಾಯ ಸಂಘದ ಸದಸ್ಯರಾದ ಪುಣ್ಯವತಿ ಯವರ ಮಗಳು ಸಾಹಿತ್ಯ ರವರು ಎಸ್ಸಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿರುವುದಕ್ಕೆ ಸಂಘದ ವತಿಯಿಂದ ಸನ್ಮಾನಿಸಲಾಯಿತು

Post a Comment

0 Comments

ಜಾಹೀರಾತು

Responsive Advertisement