Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ನಲ್ಕದ 'ನಂದಾದೀಪ'ದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ


ಪೆರ್ಲ : ನಂದಾದೀಪ ಸಂಘಟನೆಯ ನಡೆಸುತ್ತಿರುವ ಪ್ರತಿಭಾ ಪುರಸ್ಕಾರವು ಒಂದು ಮಾದರಿ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ರೀತಿಯ ಸಮಾಜಮುಖೀ ಕಾರ್ಯಕ್ರಮಗಳನ್ನು ನಡೆಸಲು ಸಂಘಟನೆಗೆ ಸಾಧ್ಯವಾಗಲಿ ಎಂದು ಶ್ರೀ ವಾಗ್ದೇವೀ ಸೇವಾ ಸಮಿತಿಯ ಅಧ್ಯಕ್ಷ  ನಾರಾಯಣ ನಾಯ್ಕ ಕುದ್ಕೋಳಿ ಇವರು ಶುಭ ಹಾರೈಸಿದರು. ಅವರು ನಲ್ಕದ ನಂದಾದೀಪ ಸಂಘಟನೆಯ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮಮತಾ ರೆಂಜಮೂಲೆಯವರು ಪ್ರತಿಭಾ ಪುರಸ್ಕಾರವನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಇನ್ನಷ್ಟು ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುವಂತಾಗಲಿ ಹಿತನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಕುಮಾರಿ ಸಾನ್ವಿ ವಸಂತ ನಾಯಕ್, ಕುಮಾರಿ ಯಕ್ಷಿತಾ ವಿ, ಪ್ಲಸ್ ಟು ವಿಭಾಗದಲ್ಲಿ ಅತ್ಯುತ್ತಮ ಅಂಕ ಗಳಿಸಿದ ಕುಮಾರಿ ಲಿಖಿತಾ, ಕುಮಾರಿ ವೈಷ್ಣವಿ ಪಿ ಎಸ್, ಕುಮಾರಿ ಪ್ರೇರಣಾ ಸಿ, ಹಾಗೂ ಬಿಬಿಎಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಕುಮಾರಿ ಅನುಜ್ಞಾ ಯನ್ ಇವರನ್ನು ಅಭಿನಂದಿಸಲಾಯಿತು. ನಂದಾದೀಪ ಸಂಘಟನೆಯ ಅಧ್ಯಕ್ಷ ಹರಿಪ್ರಸಾದ್ ರೆಂಜಮೂಲೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಜಗದೀಶ್ ಕುಲಾಲ್ ಖಂಡಿಗೆ, ಕೋಶಾಧಿಕಾರಿ ಸದಾಶಿವ ಬನಾರಿ, ಸಂಚಾಲಕ  ಹರೀಶ್ ಕುಲಾಲ್ ಖಂಡಿಗೆ, ಸದಸ್ಯರಾದ ಅಜಿತ್ ಕುಮಾರ್ ನಲ್ಕ ಕಾನ, ಶಿವಕುಮಾರ್ ರೆಂಜಮೂಲೆ , ಚಂದ್ರಶೇಖರ ಕುದ್ಕೋಳಿ, ಅಶೋಕ್ ಅಬ್ಬಿಕಟ್ಟೆ, ನಾಗೇಶ್ ಜಾಲಕೊಟ್ಯ, ವಿನೋದ ಕಿಟ್ಟಕುಮೇರಿ, ರವಿ ಕಾನ,ಸತೀಶ ರೆಂಜಮೂಲೆ,ಗಣೇಶ ಅಬ್ಬಿಕಟ್ಟೆ,ಧರ್ಮೇಶ ಕಾನ, ಸಂಕಪ್ಪ ನಲ್ಕ, ಸತೀಶ್ ಬಂಗೇರ ವರ್ಮುಡಿ, ರವೀಂದ್ರ ಹೊಸಮನೆ, ಉಮೇಶ ಕಟ್ಟಡ್ಕ ಚೋಮ ನಾಯ್ಕ ಬನಾರಿ, ದಿವಾಕರ ಕುದುಕ್ಕೊಳಿ ಶಿವ ನಾಯ್ಕ ತೋಡಕರೆ ಮೊದಲಾದವರು ಉಪಸ್ಥಿತರಿದ್ದರು. ಕಮಲಾಕ್ಷ ನಾಯಕ್ ನಲ್ಕ ಕೇರಿಮೂಲೆ ಕಾರ್ಯಕ್ರಮವನ್ನು ನಿರೂಪಿಸಿದರು.

Post a Comment

0 Comments

ಜಾಹೀರಾತು

Responsive Advertisement