Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ನಾಳೆಯಿಂದ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ ಆರಂಭ : ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಟೇಬಲ್ ಟೆನಿಸ್, ಶೂಟಿಂಗ್, ಕ್ರಿಕೆಟ್ ಸಹಿತ ಹಲವು ಸ್ಪರ್ಧೆಗಳಿಗೆ ಖೋಕ್

ಗ್ಲಾಸ್ಗೋ : ಸ್ಕಾಟ್‌ಲ್ಯಾಂಡ್‌ನ ಬಂದರು ನಗರಿ ಗ್ಲಾಸ್ಗೋದಲ್ಲಿ ಕಾಮನ್‌ವೆಲ್ತ್ ಗೇಮ್ಸ್ 2026 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ ಆಗಸ್ಟ್ 2ರವರೆಗೆ ಗೇಮ್ಸ್ ನಡೆಯಲಿದ್ದು ಜಗತ್ತಿನ ಪ್ರಮುಖ ಕಾಮನ್‌ವೆಲ್ತ್ ರಾಷ್ಟ್ರಗಳ ಸುಮಾರು 3 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು 10 ಪ್ರಮುಖ ಕ್ರೀಡೆಗಳ 215 ವಿಭಾಗಗಳಲ್ಲಿ ಸೆಣಸಾಡಲಿದ್ದಾರೆ.

ಈ ಕ್ರೀಡಾಕೂಟದ ಪಟ್ಟಿಯಿಂದ ಭಾರತದ ‘ಪದಕದ ಗಣಿ’ ಎನಿಸಿಕೊಂಡಿದ್ದ ಕ್ರೀಡೆಗಳನ್ನು ಕೈಬಿಡಲಾಗಿದೆ. ವೆಚ್ಚವನ್ನು ಕಡಿಮೆ ಮಾಡಲು ಕ್ರೀಡಾಕೂಟದ ಆಯೋಜಕರು ಕೇವಲ 10 ಪ್ರಮುಖ ಕ್ರೀಡೆಗಳಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಈ ಬಾರಿಯ ಕ್ರೀಡಾಕೂಟದಲ್ಲಿ 126 ಅಥ್ಲೀಟ್‌ಗಳನ್ನೊಳಗೊಂಡ ಬಲವಾದ ಭಾರತೀಯ ಪಡೆ ಪದಕಕ್ಕಾಗಿ ಹೋರಾಟ ನಡೆಸಲಿದೆ.

ಈ ಬಾರಿ ಭಾರತೀಯರಾದ ನೀರಜ್ ಚೋಪ್ರಾ (ಜಾವೆಲಿನ್ ಥ್ರೋ), ಮೀರಾಬಾಯಿ ಚಾನು (ವೇಟ್‌ಲಿಫ್ಟಿಂಗ್), ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ಮುರಳಿ ಶ್ರೀಶಂಕರ್ (ಲಾಂಗ್ ಜಂಪ್) ಅಥ್ಲೆಟಿಕ್ಸ್‌ನಲ್ಲಿ ಪದಕದ ಭರವಸೆ ಮೂಡಿಸಿ ಭಾಗವಹಿಸುತ್ತಿರುವ ಯುವ ತಾರೆಗಳಾಗಿದ್ದಾರೆ

ಆಯೋಜಕರ ಬಜೆಟ್ ಕೊರತೆಯಿಂದಾಗಿ ಈ ಬಾರಿ ಪಂದ್ಯಾವಳಿಯ ವೆಚ್ಚವನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಪರಿಣಾಮವಾಗಿ, 2022ರ ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಲ್ಲಿ ಭಾರತಕ್ಕೆ ಬರಪೂರ ಪದಕ ತಂದುಕೊಟ್ಟಿದ್ದ ಪ್ರಮುಖ ಕ್ರೀಡೆಗಳನ್ನೇ ಕೈಬಿಡಲಾಗಿದೆ. ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಟೇಬಲ್ ಟೆನಿಸ್, ಶೂಟಿಂಗ್, ಕ್ರಿಕೆಟ್, ಸ್ಕ್ವಾಷ್ ಮೊದಲಾದ ಪ್ರಮುಖ ಕ್ರೀಡೆಗಳನ್ನು ಕೈಬಿಡಲಾಗಿದೆ. 

ಆರಂಭದಲ್ಲಿ ಆಸ್ಟ್ರೇಲಿಯಾದ ‘ವಿಕ್ಟೋರಿಯಾ’ ರಾಜ್ಯವು ಈ ಕ್ರೀಡಾಕೂಟವನ್ನು ಆಯೋಜಿಸಬೇಕಿತ್ತು. ಆದರೆ ಅತಿಯಾದ ಖರ್ಚಿನ ಕಾರಣಕ್ಕೆ ಆಸ್ಟ್ರೇಲಿಯಾ ಹಿಂದೆ ಸರಿಯಿತು. ಕೊನೆಯ ಕ್ಷಣದಲ್ಲಿ ಗ್ಲಾಸ್ಗೋ (ಸ್ಕಾಟ್‌ಲ್ಯಾಂಡ್) ಕ್ರೀಡಾಕೂಟ ಆಯೋಜಿಸಲು ಮುಂದೆ ಬಂದಿದ್ದು, ಕಡಿಮೆ ಬಜೆಟ್‌ನಲ್ಲಿ ಪಂದ್ಯಾವಳಿ ಮುಗಿಸಲು ನಾಲ್ಕೇ ಕ್ರೀಡಾಂಗಣಗಳಿಗೆ ಪಂದ್ಯಗಳನ್ನು ಸೀಮಿತಗೊಳಿಸಿ, ಕ್ರೀಡೆಗಳ ಸಂಖ್ಯೆಯನ್ನು ಕಡಿತಗೊಳಿಸಿದೆ.

ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಅಥ್ಲೆಟಿಕ್ಸ್, ಸ್ವಿಮ್ಮಿಂಗ್, ಬಾಕ್ಸಿಂಗ್, ವೇಟ್‌ಲಿಫ್ಟಿಂಗ್, ಜಿಮ್ನಾಸ್ಟಿಕ್ಸ್, ಜೂಡೋ, ಟ್ರ್ಯಾಕ್ ಸೈಕ್ಲಿಂಗ್, ಬಾಸ್ಕೆಟ್‌ಬಾಲ್, ನೆಟ್‌ಬಾಲ್, ಲಾನ್ ಬೌಲ್ಸ್ ನ ಮೂಲಕ ಸೆಣಸಾಟ ನಡೆಯಲಿದೆ.

Post a Comment

0 Comments

ಜಾಹೀರಾತು

Responsive Advertisement