ಆಲಪ್ಪುಳ : ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ಅವರ ಸಹಚರರಿಗೆ ಆಹಾರ ವಿತರಿಸುವ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಕಮ್ಯೂನಿಟಿ ಕಿಚನ್ ಆರಂಭಿಸಲಾಗುವುದು ಎಂದು ಕೇರಳ ಆರೋಗ್ಯ ಸಚಿವ ಕೆ. ಮುರಳೀಧರನ್ ತಿಳಿಸಿದ್ದಾರೆ.
ಆಲಪ್ಪುಳ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಯಾವುದೇ ಸಂಘಟನೆಗಳು ಬ್ಯಾನರ್, ಧ್ವಜ ಅಥವಾ ಸಂಘಟನೆಯ ಹೆಸರನ್ನು ಪ್ರದರ್ಶಿಸಿ ಆಹಾರ ವಿತರಣೆ ನಡೆಸುವುದು ಸೂಕ್ತವಲ್ಲ ಎಂದು ಹೇಳಿದರು.
"ಯಾವುದೇ ಸಂಘಟನೆಗಳು ಸಮಾಜಸೇವೆಯ ಉದ್ದೇಶದಿಂದ ಆಹಾರ ನೀಡಲು ಬಯಸಿದರೆ, ಅದನ್ನು ಸಮುದಾಯ ಅಡುಗೆಮನೆಯ ಮೂಲಕವೇ ನೀಡಬಹುದು. ಸರ್ಕಾರಿ ಆಸ್ಪತ್ರೆಗಳು ರಾಜಕೀಯ ಅಥವಾ ಸಂಘಟನೆಗಳ ಪ್ರಚಾರದ ಸ್ಥಳವಲ್ಲ," ಎಂದು ಸಚಿವರು ಸ್ಪಷ್ಟಪಡಿಸಿದರು.
ಸದ್ಯ ಈ ಯೋಜನೆಯನ್ನು ಪ್ರಯೋಗಾತ್ಮಕವಾಗಿ ಆಲಪ್ಪುಳ ವೈದ್ಯಕೀಯ ಕಾಲೇಜಿನಲ್ಲಿ ಆರಂಭಿಸಲಾಗುತ್ತಿದ್ದು, ಇತರೆ ಆಸ್ಪತ್ರೆಗಳಿಗೆ ವಿಸ್ತರಿಸುವ ಕುರಿತು ಇನ್ನೂ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

0 Comments