ಕಾಸರಗೋಡು : ಬಾಲಭವನ್ ಇಂಗ್ಲೀಷ್ ಮಾಧ್ಯಮ ಶಾಲೆಯ ವಾರ್ಷಿಕ ಮಹಾಸಭೆಯು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗುರುದತ್ ಪೈ ಅವರ ಅಧ್ಯಕ್ಷತೆ ವಹಿಸಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಮಕ್ಕಳ ಪೋಷಕರು ಸಹಾಯ ಸಹಕಾರ ನೀಡಬೇಕೆಂದು ಹೇಳಿದರು. ಸ್ವಾಗತ ಹಾಗೂ ವಾರ್ಷಿಕ ವರದಿಯನ್ನು ಸುಜಾತ ಟೀಚರ್ ವಾಚಿಸಿದರು. ಕೋಶಾಧಿಕಾರಿ ಪ್ರಕಾಶ್ ಲೆಕ್ಕಪತ್ರ ಮಂಡಿಸಿದರು. 2026-28 ಸಾಲಿನ ರಕ್ಷಕ ಶಿಕ್ಷಕ ಸಂಘದ ನೂತನ ಸಮಿತಿಯನ್ನು ಶಾಲಾ ಕಾರ್ಯದರ್ಶಿ ಲೀಲಾವತಿ ನಾಯರ್, ಶಾಲಾ ಅಕಾಡಮಿಕ್ ಎಡ್ವೈಸರ್ ಡಾl ಕೆ. ಎನ್. ವೆಂಕಟ್ರಮಣ ಹೊಳ್ಳ ಅವರ ಉಪಸ್ಥಿತಿಯಲ್ಲಿ ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಮೊಹಮ್ಮದ್ ಅಸ್ಲಾಂ ಉಪಾಧ್ಯಕ್ಷರಾಗಿ ಶ್ರೀಮತಿ ಸೀಬಾ ಜತೆ ಕಾರ್ಯದರ್ಶಿಯಾಗಿ ದೀಪ್ತಿ ಟೀಚರ್ ಕೋಶಾಧಿಕಾರಿಯಾಗಿ ಪೌಲೋಸ್ ಹಾಗೂ 14 ಸದಸ್ಯರನ್ನೊಳಗೊಂಡ ಸಮಿತಿಯನ್ನು ರೂಪೀಕರಿಸಲಾಯಿತು. ರಾಧಾ ಟೀಚರ್ ವಂದಿಸಿದರು.

0 Comments