Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಾಣಿಲ - ಪೂವನಡ್ಕ ಸೇತುವೆ 26 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಯೋಜನೆ : ಇಂಜಿನಿಯರ್ ಗಳ ಸ್ಥಳ ಭೇಟಿ


ಪೆರ್ಲ : ಕೇರಳ - ಕರ್ನಾಟಕ ರಾಜ್ಯದ ಗಡಿ ಪ್ರದೇಶ ಸಂಪರ್ಕದ ಮಹತ್ವಾಕಾಂಕ್ಷೆಯ ಯೋಜನೆಯಾದ ಮಾಣಿಲ - ಪೂವನಡ್ಕ ಸೇತುವೆಗೆ 26 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಯೋಜನೆ ಇರಿಸಲಾಗಿದ್ದು, ಕಳೆದ ಬಾರಿ ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕರ್ನಾಟಕ ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕೀಹೊಳಿ
ಅವರು ಬೇಂಗಪದವು ಸಮೀಪದ ಪೂವನಡ್ಕ ಹೊಳೆಗೆ ಸೇತುವೆ ನಿರ್ಮಿಸಲು ಸ್ಥಳ ಭೇಟಿ ನಡೆಸಲಾಗಿತ್ತು. ಇದೀಗ ಅವರ ನಿರ್ದೇಶನದಂತೆ ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಗಳ ತಂಡ ಸ್ಥಳ ಸಂದರ್ಶನ ನಡೆಸಿ ಅವಲೋಕನಗೈದಿದೆ. ಇನ್ನು ಸದ್ಯದಲ್ಲಿಯೇ ಈ ವರದಿ ಸರಕಾರಕ್ಕೆ ಸಮರ್ಪಿತಗೊಂಡು ಯೋಜನೆಗೆ ಅನುದಾನ ಮೀಸಲಿರಿಸಲಾಗುವುದೆಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಬಿ.ಕುಸುಮಾವತಿ, ಯೋಜನಾ‌ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ನೆರೆಯ ಮಾಣಿಲ ಗ್ರಾಮದ ಸಾಮಾಜಿಕ ನೇತಾರ ಗೋಪಾಲಕೃಷ್ಣ ಕಕ್ವೆ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್

Post a Comment

0 Comments

ಜಾಹೀರಾತು

Responsive Advertisement