Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಂಜೇಶ್ವರದಲ್ಲಿ 46 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ದೇವರ ವಿಗ್ರಹ ರಚನೆಗೆ ಮುಹೂರ್ತ

ಮಂಜೇಶ್ವರ : ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಈ ಬಾರಿ ಜರಗಲಿರುವ 46 ನೇ ವರ್ಷದ ಸಾರ್ವಜನಿಕ ಮಂಜೇಶ್ವರ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀ ಮಹಾಗಣಪತಿ ದೇವರ ವಿಗ್ರಹ ಮುಹೂರ್ತವು ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ನಡೆಯಿತು.  ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಯಾದವ ಬಡಾಜೆ, ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ತೂಮಿನಾಡು, ಕೋಶಾಧಿಕಾರಿ ಅಶೋಕ್ ದೇವಾಡಿಗ ಕುಚ್ಚಿಕಾಡ್, ಪ್ರಧಾನ ಸಂಚಾಲಕರೂ, ಕ್ಷೇತ್ರದ ಅಧ್ಯಕ್ಷರಾದ ನವೀನ್ ರಾಜ್ ಕೆ.ಜೆ, ಪದ್ಮನಾಭ ಕಡಪ್ಪರ, ಸಂಘಟನಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಮಾಡ, ಅವಿನಾಶ್ ಹೆಗ್ಡೆ, ಕ್ಷೇತ್ರದ ಗುರುಸ್ವಾಮಿ ಉದಯ ಪಾವಳ, ಪ್ರಧಾನ ಅರ್ಚಕರಾದ ತಿರುಮಲೇಶ್ ಆಚಾರ್ಯ ಹೊಸಂಗಡಿ, ವಿಗ್ರಹ ಸೇವಾ ಕರ್ತೃ ಕಿರಣ್ ಶೆಟ್ಟಿ ಉದ್ಯಾವರ ಮಾಡ, ಸಮಿತಿ ಪದಾಧಿಕಾರಿಗಳಾದ ದಿನಕರ ಬಿ.ಎಂ, ರಮೇಶ್ ಹೊಸಂಗಡಿ, ಶಿವಪ್ರಸಾದ್ ಪೆಲಪ್ಪಾಡಿ, ಚಂದ್ರಹಾಸ ಪೆಲಪ್ಪಾಡಿ, ನವೀನ್ ಅಡಪ್ಪ ಹೊಸಬೆಟ್ಟು, ಅಖಿಲೇಶ್ ಹೊಸಂಗಡಿ, ಶಿವ ಪ್ರಸಾದ್ ರಾವ್ ಕಟ್ಟೆ ಬಜಾರ್, ಮೋಹನ್ ದಾಸ್ ಸುಂಕದಕಟ್ಟೆ, ಹರಿಶ್ಚಂದ್ರ ಮಂಜೇಶ್ವರ, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ದೇವರಾಜ್ ಎಂ.ಎಸ್, ಕೋಶಾಧಿಕಾರಿ ಸುನಿಲ್ ಕುಮಾರ್ ಗಾಣಿಗ ಮೊದಲಾದವರು ಪಾಲ್ಗೊಂಡರು. 

ವಿಗ್ರಹ ರಚನೆಯನ್ನು ಶಿಲ್ಪಿ ಮಹೇಶ್ ಆಚಾರ್ಯ ಬಾಯಾರು ನಿರ್ಮಿಸುತ್ತಿದ್ದು, ಈ ಬಾರಿಯ ವಿಗ್ರಹ ಸೇವೆಯನ್ನು ಧಾರ್ಮಿಕ, ಸಾಮಾಜಿಕ, ಮುಂದಾಳು, ಕೊಡುಗೈದಾನಿ ಕಿರಣ್ ಶೆಟ್ಟಿ ಉದ್ಯಾವರ ಮಾಡ ಮನೆಯವರು ಸಮರ್ಪಿಸುವರು. ಈ ಬಾರಿಯ ಮಂಜೇಶ್ವರ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 14 ರಿಂದ ಮೊದಲ್ಗೊಂಡು ಸೆಪ್ಟೆಂಬರ್ 17ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಲಿದೆ.

*ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್*

https://www.instagram.com/visheshachannel/  

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial


#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement