Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ರೂಪಾಶ್ರೀ ವರ್ಕಾಡಿಗೆ ಮಿಥ್ಯ ಕನ್ನಡ ಚಲನಚಿತ್ರದ ಅಭಿನಯಕ್ಕೆ 2025ನೇ ಸಾಲಿನ ಅತ್ಯುತ್ತಮ ಸಹನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ


 ಮಂಜೇಶ್ವರ : ಕಾಸರಗೋಡು ಜಿಲ್ಲೆಯ ಹೆಮ್ಮೆಯ ಕಲಾವಿದೆ, ಗಡಿನಾಡ ಕನ್ನಡತಿ, ರಂಗಭೂಮಿ ಹಾಗೂ ಚಲನಚಿತ್ರ ನಟಿ  ರೂಪಾಶ್ರೀ ವರ್ಕಾಡಿ ಅವರಿಗೆ ಮಿಥ್ಯ ಕನ್ನಡ ಚಲನಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ 2025ನೇ ಸಾಲಿನ ಅತ್ಯುತ್ತಮ ಸಹನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. 

ಮಂಜೇಶ್ವರದ ವರ್ಕಾಡಿಯ ಮಣ್ಣಿನ ಪ್ರತಿಭೆ ಇಂದು ರಾಷ್ಟ್ರದ ವೇದಿಕೆಯಲ್ಲಿ ಮಿಂಚಿ, ಕಾಸರಗೋಡು ಜಿಲ್ಲೆಯ ಕಲಾ ವೈಭವವನ್ನು ದೇಶದಾದ್ಯಂತ ಪಸರಿಸಿದ್ದಾರೆ. ಇದು ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ನಮ್ಮ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಂದ ಗೌರವವೂ ಆಗಿದೆ.

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ರೂಪಾಶ್ರೀ ವರ್ಕಾಡಿ ಅವರಿಗೆ ಸಂಘಟನೆಯ ಗೌರವಾಧ್ಯಕ್ಷ ಎ. ಆರ್. ಸುಬ್ಬಯ್ಯಕಟ್ಟೆ,ಅಧ್ಯಕ್ಷ ರವಿ ನಾಯ್ಕಾಪು ಅಭಿನಂದಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement