Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಂಗ್ರೆಸ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೈಜೋಡಿಸಿದೆ ಎಂಬ ಸುದ್ದಿ ಆತಂಕಕಾರಿ: ಎ.ಪಿ. ಅಬ್ದುಲ್ಲಕುಟ್ಟಿ


ಚೀಮೇನಿ : ಪಾಕಿಸ್ತಾನದ ಗುಪ್ತಚರ ಸಂಸ್ಥೆ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೈಜೋಡಿಸಿದೆ ಎಂಬ ಸುದ್ದಿ ಆತಂಕಕಾರಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ಹೇಳಿದ್ದಾರೆ. ಚೀಮೇನಿಯ ಮುಂಡದಲ್ಲಿ ನಡೆದ ಬಿಜೆಪಿ ನೀಲೇಶ್ವರ ಮಂಡಲದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಂಬೈ ಭಯೋತ್ಪಾದಕ ದಾಳಿ ಸೇರಿದಂತೆ ಹಲವು ಉಗ್ರ ದಾಳಿಗಳ ಹೊಣೆಯನ್ನು ಆರ್‌ಎಸ್‌ಎಸ್‌ ಮೇಲೆ ಹೊರಿಸಲು ಕಾಂಗ್ರೆಸ್ ಪ್ರಯತ್ನಿಸಿತ್ತು ಎಂಬ ವಿಷಯದ ಕುರಿತು ಕೇರಳದಲ್ಲಿ ಗಂಭೀರ ಚರ್ಚೆ ನಡೆಯಬೇಕೆಂದು ಅವರು ಹೇಳಿದರು. ದೇಶದಲ್ಲಿ ವಂದೇ ಭಾರತ್ ರೈಲು,ಹೈಡ್ರೋಜನ್ ರೈಲು,ಬುಲೆಟ್ ರೈಲು,ಚೆನಾಬ್ ಸೇತುವೆ ಹಾಗೂ ಮುಂಬೈನ ವರ್ಲಿ ಸೀ ಲಿಂಕ್ ಮೊದಲಾದ ಮಹತ್ವದ ಅಭಿವೃದ್ಧಿ ಯೋಜನೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜಾರಿಯಾಗಿವೆ. ಇಂತಹ ಅಭಿವೃದ್ಧಿ ಯೋಜನೆಗಳನ್ನು ವಿದ್ಯಾರ್ಥಿಗಳು ಭೇಟಿ ನೀಡಿ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ವಿರುದ್ಧವೂ ಅಬ್ದುಲ್ಲಕುಟ್ಟಿ ಟೀಕಿಸಿ, ಕೇವಲ ಎರಡು ತಿಂಗಳಲ್ಲೇ ಅವರ ಆಡಳಿತದ ಬಗ್ಗೆ ಜನರಿಗೆ ನಿರಾಸೆಯಾಗಿದೆ ಎಂದು ಆರೋಪಿಸಿದರು. ಪಿಣರಾಯಿ ವಿಜಯನ್ ಮತ್ತು ಸಿಪಿಎಂ ವಿರುದ್ಧದ ಅಸಮಾಧಾನದಿಂದಲೇ ಯುಡಿಎಫ್‌ಗೆ ಜನ ಬೆಂಬಲ ನೀಡಿದ್ದರು. ತ್ರಿಪುರ ಹಾಗೂ ಪಶ್ಚಿಮ ಬಂಗಾಳದಂತೆ ತೃಕ್ಕರಿಪ್ಪೂರು, ನೀಲೇಶ್ವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಿಜೆಪಿಯ ಬಲ ಹೆಚ್ಚಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ನೀಲೇಶ್ವರ ಮಂಡಲ ಅಧ್ಯಕ್ಷ ಸಾಗರ್ ಚಾತ್ತಮತ್ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಎಂ.ಎಲ್. ಅಶ್ವಿನಿ, ಕಿಸಾನ್ ಮೋರ್ಚಾ ರಾಜ್ಯ ಕಾರ್ಯದರ್ಶಿ ಕುಂಜಿಕ್ಕಣ್ಣನ್ ವಿ. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎ.ಕೆ. ಚಂದ್ರನ್ ಹಾಗೂ ರಾಜೀವನ್ ಚೀಮೇನಿ ಮೊದಲಾದವರು ಮಾತನಾಡಿದರು.

Post a Comment

0 Comments

ಜಾಹೀರಾತು

Responsive Advertisement