ಧರ್ಮತ್ತಡ್ಕ : ಶ್ರೀ ದುರ್ಗಾಪರಮೇಶ್ವರಿ ಐಡೆಡ್ ಹೈಯರ್ ಸೆಕೆಂಡರಿ ಶಾಲೆ (ಎಸ್‌ಡಿಪಿಎಚ್‌ಎಸ್‌ಎಸ್) ಧರ್ಮತ್ತಡ್ಕದಲ್ಲಿ 2026–27ನೇ ಶೈಕ್ಷಣಿಕ ಸಾಲಿನ ರಕ್ಷಕ-ಶಿಕ್ಷಕ ಸಂಘ (ಪಿಟಿಎ) ಮಹಾಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಪಿಟಿಎ ಅಧ್ಯಕ್ಷ ಅಶೋಕ್ ಭಂಡಾರಿ ಕುಡಾಲು ವಹಿಸಿದ್ದರು. ವೇದಿಕೆಯಲ್ಲಿ ಶಾಲೆಯ ಪ್ರಾಂಶುಪಾಲ ಸತೀಶ್ ಕುಮಾರ್ ಶೆಟ್ಟಿ, ವ್ಯವಸ್ಥಾಪಕ ಶಂಕರನಾರಾಯಣ ಭಟ್, ನಿವೃತ್ತ ಪ್ರಾಂಶುಪಾಲ ರಾಮಚಂದ್ರ ಭಟ್, ಮಾತೃ ಮಂಡಳಿ ಅಧ್ಯಕ್ಷೆ ದಿವ್ಯಭಾರತಿ ಹಾಗೂ ಮುಖ್ಯೋಪಾಧ್ಯಾಯ ಶಶಿಕುಮಾರ್ ಪಿ. ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಭೆಯಲ್ಲಿ 2026–27ನೇ ಶೈಕ್ಷಣಿಕ ವರ್ಷದ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ದಿನೇಶ್ ಚೆರುಗೋಳಿ ಅವರನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ, ಅಶ್ರಫ್ ಸೋಕೆ ಅವರನ್ನು ಉಪಾಧ್ಯಕ್ಷರಾಗಿ, ಪಾವನ ಎಸ್. ಅವರನ್ನು ಮಾತೃ ಮಂಡಳಿ ಅಧ್ಯಕ್ಷೆಯಾಗಿ ಹಾಗೂ ಲತಾ ಅವರನ್ನು ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ ಉಣ್ಣಿಕೃಷ್ಣನ್ ಪ್ರಾರ್ಥನೆ ಹಾಡಿದರು. ಶ್ವೇತಾ ಕುಮಾರಿ ವಾರ್ಷಿಕ ವರದಿ ಮಂಡಿಸಿದರು. ಜಗದೀಶನ್ ಸ್ವಾಗತಿಸಿ, ನಿವೇದಿತಾ ವಂದನಾರ್ಪಣೆ ಸಲ್ಲಿಸಿದರು. ಚೇತನಾ ನಿರೂಪಿಸಿದರು.
.jpeg)
0 Comments