ತಿರುವನಂತಪುರ : ಕೇರಳದಲ್ಲಿ ಮಳೆಯ ಎಚ್ಚರಿಕೆ ಪರಿಷ್ಕರಿಸಲಾಗಿದ್ದು, ಇನ್ನೆರಡು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಲಪ್ಪುರಂ ಮತ್ತು ತ್ರಿಶೂರ್ ಜಿಲ್ಲೆಗಳಿಗೂ ಎಲ್ಲೋ ಅಲರ್ಟ್ ವಿಸ್ತರಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಈಗಾಗಲೇ ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ವಯನಾಡು, ಪಾಲಕ್ಕಾಡು ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಜಾರಿಯಲ್ಲಿದ್ದು, ಒಟ್ಟು 8 ಜಿಲ್ಲೆಗಳಲ್ಲಿ ಮಳೆ ಎಚ್ಚರಿಕೆ ಮುಂದುವರಿದಿದೆ. ಉತ್ತರ ಕೇರಳದ ಜಿಲ್ಲೆಗಳು ಹಾಗೂ ಕೆಲವೆಡೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

0 Comments