ಬಾಡೂರುಪದವು : ಪುತ್ತಿಗೆ ಪಂಚಾಯತು ವ್ಯಾಪ್ತಿಯ ಬಾಡೂರು ಕೇರಿ ಎಂಬಲ್ಲಿ ತೀವ್ರ ಮಳೆಗೆ ಗುಡ್ಡವೊಂದು ಕುಸಿಯ ತೊಡಗಿದ್ದು ಇದರ ಕೆಳಗಿರುವ ಮನೆಯವರು ದಿನ ರಾತ್ರಿ ಭಯದಿಂದ ಕಳೆಯುವಂತಾಗಿದೆ. ಬಾಡೂರು ಕೇರಿ ನಿವಾಸಿ ಬಾಬು ಮೂಲ್ಯರ ಮಗ ಸದಾಶಿವ ಎಂಬವರ ಮನೆಯ ಹಿಂಬದಿಯ ಗುಡ್ಡೆ ನಿನ್ನೆ ರಾತ್ರಿ ಹಾಗೂ ಇವತ್ತು ಬೆಳಿಗ್ಗೆ ಜರಿದು ಬಿದ್ದಿದೆ.
ಒಂದು ದೊಡ್ಡ ಗಾತ್ರದ ಬಂಡೆ ಅವರ ಅಡುಗೆ ಕೋಣೆಯಲ್ಲಿ ಬಂದು ನಿಂತಿದೆ. ನಿನ್ನೆ ಸುರಿದ ಭಾರಿ ಮಳೆಯಿಂದ ಇದು ಸಂಭವಿಸಿದೆ. ಇನ್ನೂ ಜರಿದು ಬೀಳುವ ಸಾಧ್ಯತೆ ಇದೆ. ಬಾಡೂರು ಗ್ರಾಮಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮನೆಯಲ್ಲಿ ಅವರ ಅಸೌಖ್ಯ ಪೀಡಿತರಾದ ತಾಯಿ ಲಕ್ಷ್ಮೀ ಹಾಗೂ ಆನಂದ ಅವರ ಪತ್ನಿ, ಮಕ್ಕಳು ಭಯಾಂತಕದಲ್ಲಿ ವಾಸಿಸುತ್ತಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅಗ್ರಹಿಸಲಾಗಿದೆ.
.jpeg)

0 Comments