ಕಾಸರಗೋಡು : ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾಸರಗೋಡು ಜಿಲ್ಲೆಯ ವಿವಿಧ ಸಂಘಟನಾ ಮಂಡಲಗಳಲ್ಲಿ 'ಪಂಡಿತ್ ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ' ಅಂಗವಾಗಿ ಜುಲೈ 18 ಮತ್ತು 19ರಂದು ಅಧ್ಯಯನ ಶಿಬಿರಗಳು ನಡೆಯಲಿವೆ.
ಕುಂಬಳೆ ಸಂಘಟನಾ ಮಂಡಲದ ಅಧ್ಯಯನ ಶಿಬಿರವು ಎಣ್ಮಕಜೆ ಪಂಚಾಯತ್‌ನ ಪೆರ್ಲ ಶಂಕರ ಸದನದಲ್ಲಿ ನಡೆಯಲಿದೆ. ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ನವ್ಯ ಹರಿದಾಸ್ ಶಿಬಿರವನ್ನು ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಕೋಝಿಕ್ಕೋಡ್ ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಭಾಗವಹಿಸಲಿದ್ದಾರೆ.
ತೃಕ್ಕರಿಪುರ ಸಂಘಟನಾ ಮಂಡಲದ ಅಧ್ಯಯನ ಶಿಬಿರವು ಶ್ರೀ ಚಕ್ರಪಾಣಿ ವಿದ್ಯಾಮಂದಿರದಲ್ಲಿ ನಡೆಯಲಿದ್ದು, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಎ. ವೇಲಾಯುಧನ್ ಉದ್ಘಾಟನೆ ನೆರವೇರಿಸಲಿದ್ದಾರೆ. ಸಮಾರೋಪ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸೆಲ್ ಸಂಯೋಜಕ ವಿ.ಕೆ. ಸಜೀವನ್ ಭಾಗವಹಿಸಲಿದ್ದಾರೆ.
ನೀಲೇಶ್ವರ ಸಂಘಟನಾ ಮಂಡಲದ ಅಧ್ಯಯನ ಶಿಬಿರವು ಚೀಮೇನಿ ಮುಂಡದಲ್ಲಿ ನಡೆಯಲಿದ್ದು, ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಡಾರ್ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. , ಎ.ಪಿ. ಅಬ್ದುಲ್ಲ ಕುಟ್ಟಿ ಭಾಗವಹಿಸಲಿದ್ದಾರೆ.
ಪ್ರತಿ ಅಧ್ಯಯನ ಶಿಬಿರದಲ್ಲಿ ವಿವಿಧ ಪಂಚಾಯತ್ ವ್ಯಾಪ್ತಿಯಿಂದ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ.

0 Comments