Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ತಿರುವೋಣಂ ಬಂಪರ್ ಲಾಟರಿ : ಕಾಸರಗೋಡು ಜಿಲ್ಲಾ ಮಟ್ಟದ ಬಿಡುಗಡೆ ಮತ್ತು ವಿತರಣೆಗೆ ಚಾಲನೆ

ಕಾಸರಗೋಡು : ಕೇರಳ ರಾಜ್ಯ ಲಾಟರಿ ಇಲಾಖೆಯ 2026ರ ತಿರುವೋಣಂ ಬಂಪರ್ ಲಾಟರಿಯ ಕಾಸರಗೋಡು ಜಿಲ್ಲಾ ಮಟ್ಟದ ಬಿಡುಗಡೆ ಹಾಗೂ ವಿತರಣಾ ಕಾರ್ಯಕ್ರಮವನ್ನು ಶಾಸಕ ಕಲ್ಲಟ್ರ ಮಾಯಿನ್ ಅವರು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಮಾಹಿತಿ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಲಾಟರಿ ಅಧಿಕಾರಿ ಪಿ.ವಿ. ಪ್ರಭಾ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಚೆಂಗಳ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯ ಮೊಹಮ್ಮದ್ ಹನೀಫಾ ವಿ.ಎ., ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಕೆ.ಎಂ. ಶ್ರೀಧರನ್, ಪ್ರಭಾಕರನ್ ಪಿ., ಬಾಬು ಕೆ.ವಿ., ಎ. ಮಧುಸೂದನನ್ ನಂಬ್ಯಾರ್ ಹಾಗೂ ಪಿ.ವಿ. ಉಮೇಶನ್ ಅವರು ಮಾತನಾಡಿದರು. ಸಹಾಯಕ ಜಿಲ್ಲಾ ಲಾಟರಿ ಅಧಿಕಾರಿ ಜಯಲಕ್ಷ್ಮಿ ಎಸ್. ಸ್ವಾಗತಿಸಿ, ಜಿಲ್ಲಾ ಲಾಟರಿ ಕಲ್ಯಾಣ ಅಧಿಕಾರಿ ಸುಜಿತ್ ಕೆ.ಸಿ. ವಂದಿಸಿದರು.

Post a Comment

0 Comments

ಜಾಹೀರಾತು

Responsive Advertisement