ಕಾರ್ಯಕ್ರಮದ ಅಂಗವಾಗಿ ದೇವಾಲಯದ ಅರ್ಚಕ ಶಿವರಾಂ ಭಟ್ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನೆರವೇರಿಸಿದರು. ಬಳಿಕ ವರಮಹಾಲಕ್ಷ್ಮಿ ಹಬ್ಬದ ಆಮಂತ್ರಣ ಪತ್ರಿಕೆಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯದ ಮೊಕ್ತೇಸರ ಜಗನ್ನಾಥ ರೈ ಪೆರಡಾಲ ಗುತ್ತು, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಮಾಜಿ ಮೊಕ್ತೇಸರ ಚಂದ್ರಹಾಸ ರೈ ಪೆರಡಾಲ ಗುತ್ತು, ಭಾಸ್ಕರ ಪಂಜಿತ್ತಡ್ಕ, ಸತೀಶ್ ಕುಮಾರ್ ಪುದ್ಯೋಡು, ಮಾತೃ ಸಮಿತಿ ಅಧ್ಯಕ್ಷೆ ವಿನಯ ಜೆ. ರೈ, ಪದಾಧಿಕಾರಿಗಳಾದ ಸೌಮ್ಯ ರವಿ ಪಟ್ಟಾಜೆ, ಹೇಮಾವತಿ ಬಂಗೇರ ಮುರಿಯಂಕೂಡ್ಲು, ಸುಜಾತಾ ಪಂಜಿತ್ತಡ್ಕ ಸೇರಿದಂತೆ ಸೇವಾ ಸಮಿತಿ ಸದಸ್ಯರು, ಶಿವಶಕ್ತಿ ಪದಾಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಆಗಸ್ಟ್ 28ರಂದು ನಡೆಯಲಿರುವ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿಯವರು ಮನವಿ ಮಾಡಿದ್ದಾರೆ.
.jpeg)
0 Comments