ಪೆರ್ಲ: ಎಣ್ಮಕಜೆ ಗ್ರಾಪಂ ಕುಟುಂಬಶ್ರೀ ಸಿ.ಡಿ.ಎಸ್ ಆಶ್ರಯದಲ್ಲಿ "ವರ್ಷ ಋತು ಸಂಭ್ರಮ" ಪೆರ್ಲ ಬಯಲಿನ ಗದ್ದೆಯಲ್ಲಿ ನಡೆಯಿತು. ಗ್ರಾಪಂ ಅಧ್ಯಕ್ಷೆ ಕುಸುಮಾವತಿ ಬಿ. ಕಾರ್ಯಕ್ರಮ ಉದ್ಘಾಟಿಸಿದರು.ಗ್ರಾಪಂ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ವಳಮುಗರು ಅಧ್ಯಕ್ಷತೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ ಜೆ.ಎಸ್,ಕುಟುಂಬಶ್ರೀ ಮಿಷನ್ ಕಾಸರಗೋಡು ಎಡಿಡಬ್ಲ್ಯೂಸಿ ಹರಿದಾಸ್ ಡಿ ಮುಖ್ಯ ಅತಿಥಿಯಾಗಿದ್ದರು.ಪಂ.ಯೋಜನಾ ಸಮಿತಿ ಉಪಾಧ್ಯಕ್ಷ ಬಿ.ಎಸ್. ಗಾಂಭೀರ್, ಸಿಡಿಎಸ್ ಮೆಂಬರ್ ಸೆಕ್ರಟರಿ ಗಿರೀಶ್.ಟಿ, ಪಂ.ಸದಸ್ಯರಾದ ರಾಮಚಂದ್ರ ಎಂ,ಆಯಿಷಾ ಎ.ಎ,ರಾಬಿಯ,ನಿವೃತ್ತ ನೊಂದಾವಣಾಧಿಕಾರಿ ಮುಹಮ್ಮದಾಲಿ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಭತ್ತ ಕೃಷಿಕ, ಪೆರ್ಲ ಬೀಡಿನ ವಾಸು ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕಿಂತ ಮುಂಚಿತ ಎಣ್ಮಕಜೆ ಗ್ರಾ.ಪ.ಕಚೇರಿಯ ಸಿಡಿಎಸ್ ನಿಂದ ಪೆರ್ಲ ಪೇಟೆಯ ಮೂಲಕ ಮೆರವಣಿಗೆಯಲ್ಲಿ ಕುಟುಂಬಶ್ರೀ ಕಾರ್ಯಕರ್ತೆಯರು ಸಾಗಿ ಬಂದರು.ಸಿಡಿಎಸ್ ಅಧ್ಯಕ್ಷೆ ನವೀನ ಕುಮಾರಿ ಸ್ವಾಗತಿಸಿ ಜೀವನೋಪಾಯ ಉಪ ಸಮಿತಿಯ ಗಿರಿಜಾ ಬಿ ವಂದಿಸಿದರು. ಶಶಿಕಲಾ ಸ್ವರ್ಗ ನಿರೂಪಿಸಿದರು. ಬಳಿಕ ಕೆಸರುಗದ್ದೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

.jpeg)

0 Comments