ಕೋಝಿಕ್ಕೋಡು : ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಸೂತಿ ವಾರ್ಡ್‌ಗೆ ಸಹಾಯಕಳಾಗಿ ಬಂದಿದ್ದ ಯುವತಿಯೋರ್ವಳನ್ನು 28 ಗ್ರಾಂ ಹ್ಯಾಶಿಷ್ ಎಣ್ಣೆಯೊಂದಿಗೆ ಬಂಧಿಸಲಾಗಿದೆ. ಬಂಧಿತೆಯನ್ನು ವಯನಾಡು ನಿವಾಸಿ ಅಶ್ವತಿ ಎಂದು ಗುರುತಿಸಲಾಗಿದೆ. ಮೆಡಿಕಲ್ ಕಾಲೇಜು ಪೊಲೀಸರು ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಪ್ಯಾರಾಚೂಟ್ ತೆಂಗಿನೆಣ್ಣೆಯ ಸಣ್ಣ ಬಾಟಲಿಯಲ್ಲಿ ಹ್ಯಾಶಿಷ್ ಎಣ್ಣೆಯನ್ನು ಅಡಗಿಸಿಟ್ಟಿದ್ದರು. ಆಸ್ಪತ್ರೆಯಲ್ಲಿದ್ದ ಇತರರಿಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಮಾದಕ ವಸ್ತು ಪತ್ತೆಯಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ, ಪ್ರಸ್ತುತ ಜೈಲಿನಲ್ಲಿರುವ ತನ್ನ ಪತಿಗೆ ಹ್ಯಾಶಿಷ್ ಎಣ್ಣೆ ತಲುಪಿಸಲು ಇದನ್ನು ತಂದಿದ್ದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿರುವ ಪೊಲೀಸರು, ಈ ಸಂಬಂಧ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments