Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

1.025 ಕೆ.ಜಿ. ಗಾಂಜಾ ವಶಕ್ಕೆ; ಉತ್ತರ ಪ್ರದೇಶ ಮೂಲದ ವ್ಯಕ್ತಿ ಬಂಧನ


ಕಾಸರಗೋಡು, ಜು. 26: ಕಾಸರಗೋಡು ತಾಲ್ಲೂಕಿನ ಬಂದಡ್ಕದಲ್ಲಿರುವ ಲೆಜೆಂಡ್ ಎಂಕೆಡಿ ಎಂಬ ಬೋರ್ಡ್ ಹೊಂದಿರುವ ಕ್ಲಬ್ ಕಟ್ಟಡದ ನೆಲಮಹಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1.025 ಕಿಲೋಗ್ರಾಂ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು, ಉತ್ತರ ಪ್ರದೇಶ ಮೂಲದ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಉತ್ತರ ಪ್ರದೇಶದ ಫರುಖಾಬಾದ್ ಜಿಲ್ಲೆಯ ಹುಸೇನ್ ಗಂಜ್ ನಿವಾಸಿ ನೆಕ್ರಾಂ ಅವರ ಪುತ್ರ ಸರ್ವೇಶ್ ಕುಮಾರ್ ಎಂದು ಗುರುತಿಸಲಾಗಿದೆ.

ಜುಲೈ 25ರಂದು ರಾತ್ರಿ ನಡೆದ ದಾಳಿಯಲ್ಲಿ ಬಂದಡ್ಕ ರೇಂಜ್ ಅಬಕಾರಿ ಇನ್ಸ್‌ಪೆಕ್ಟರ್ ಶಹಬಾಸ್ ಅಹ್ಮದ್ ಎ.ಪಿ. ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ,  ಪ್ರಕರಣ ದಾಖಲಿಸಿದೆ. ಕಾರ್ಯಾಚರಣೆಯಲ್ಲಿ ಪ್ರಿವೆಂಟಿವ್ ಅಧಿಕಾರಿ (ಗ್ರೇಡ್) ರಮೇಶ್ ಬಾಬು ಇ.ಎಂ., ಸಿವಿಲ್ ಅಬಕಾರಿ ಅಧಿಕಾರಿಗಳಾದ ಜೋಬಿ ಕೆ.ಪಿ., ಸುಬಿನ್ ಫಿಲಿಪ್ ಹಾಗೂ ಮಹಿಳಾ ಸಿವಿಲ್ ಅಬಕಾರಿ ಅಧಿಕಾರಿ ಜಸ್ನಾ ಕೆ. ಚಂದ್ರನ್ ಭಾಗವಹಿಸಿದ್ದರು.

Post a Comment

0 Comments

ಜಾಹೀರಾತು

Responsive Advertisement