Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಓಣಂ ಸಂದರ್ಭ ಹಾಲಿನ ಗುಣಮಟ್ಟ ಪರಿಶೀಲನೆಗೆ ಮಾಹಿತಿ ಕೇಂದ್ರ ಆರಂಭ


ಕಾಸರಗೋಡು: ಓಣಂ ಸಂದರ್ಭದಲ್ಲಿ ಮಾರುಕಟ್ಟೆಗೆ ಆಗಮಿಸುವ ಹಾಲಿನ ಗುಣಮಟ್ಟವನ್ನು ಪರಿಶೀಲಿಸಲು ಕ್ಷೀರ ಅಭಿವೃದ್ಧಿ ಇಲಾಖೆ ಮಾಹಿತಿ ಕೇಂದ್ರಗಳನ್ನು ಆರಂಭಿಸಿದೆ.

ಕಾಸರಗೋಡು ಕ್ಷೀರ ಅಭಿವೃದ್ಧಿ ಇಲಾಖೆಯ ಜಿಲ್ಲಾ ಗುಣನಿಯಂತ್ರಣ ಕಚೇರಿಯ ನೇತೃತ್ವದಲ್ಲಿ ಜಿಲ್ಲಾ ಮಾಹಿತಿ ಕೇಂದ್ರವನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಮಿಲ್ಕ್ ಅನಲೈಸರ್ ಯಂತ್ರವನ್ನು ಸ್ವಿಚ್ ಆನ್ ಮಾಡುವ ಮೂಲಕ ಕೇಂದ್ರವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೀರ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಕೆ. ಉಷಾದೇವಿ ವಹಿಸಿದ್ದರು. ಜಿಲ್ಲಾ ಗುಣನಿಯಂತ್ರಣ ಅಧಿಕಾರಿ ಪಿ.ಎಚ್. ಸಿನಾಜ್ಜುದ್ದೀನ್ ಮಾಹಿತಿ ಕೇಂದ್ರದಲ್ಲಿ ನಡೆಯುವ ಹಾಲಿನ ಪರೀಕ್ಷೆಯ ಕುರಿತು ವಿವರಿಸಿದರು. ಸಹಾಯಕ ನಿರ್ದೇಶಕಿ ಕಲ್ಯಾಣಿ ನಾಯರ್ ಸ್ವಾಗತಿಸಿದರು. ನೀಲೇಶ್ವರಂ ಹಿರಿಯ ಕ್ಷೀರ ಅಭಿವೃದ್ಧಿ ಅಧಿಕಾರಿ ಸ್ಮಿತಾ ಮಾರಾರ್ ವಂದಿಸಿದರು.

ಆಗಸ್ಟ್ 24ರಂದು ಸಂಜೆ 5 ಗಂಟೆಯವರೆಗೆ ಕಾಸರಗೋಡು ಸಿವಿಲ್ ಸ್ಟೇಷನ್‌ನಲ್ಲಿರುವ ಕ್ಷೀರ ಅಭಿವೃದ್ಧಿ ಇಲಾಖೆಯ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಮಾಹಿತಿ ಕೇಂದ್ರ ಕಾರ್ಯನಿರ್ವಹಿಸಲಿದೆ.ಹಾಲು ಉತ್ಪಾದಕರು, ಗ್ರಾಹಕರು ಹಾಗೂ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳು ಇಲ್ಲಿ ಉಚಿತವಾಗಿ ಹಾಲಿನ ಗುಣಮಟ್ಟ ಪರೀಕ್ಷೆ ಮಾಡಿಸಿಕೊಳ್ಳಬಹುದು. ಪರೀಕ್ಷೆಯಲ್ಲಿ ಗುಣಮಟ್ಟವಿಲ್ಲದ ಅಥವಾ ಸುರಕ್ಷಿತವಲ್ಲದ ಹಾಲು ಪತ್ತೆಯಾದರೆ, ಮುಂದಿನ ಕ್ರಮಕ್ಕಾಗಿ ಆಹಾರ ಸುರಕ್ಷತಾ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ.

ಆಸಕ್ತರು 200 ಮಿಲಿಲೀಟರ್ ಹಾಲಿನ ಮಾದರಿಯೊಂದಿಗೆ ಮಾಹಿತಿ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement