Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕೇರಳ ರಾಜ್ಯದ ಶಾಲೆಗಳಲ್ಲಿ ಇಂದು ನಾಡ ಹಬ್ಬ ಓಣಂ ಆಚರಣೆ : ನಾಳೆಯಿಂದ ರಜೆ

ತಿರುವನಂತಪುರ: ಓಣಂ ರಜೆಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಶಾಲೆಗಳು ಇಂದು ಮುಚ್ಚಲಿವೆ. ಆಗಸ್ಟ್ 22ರಿಂದ ಆಗಸ್ಟ್ 30ರವರೆಗೆ ಓಣಂ ರಜೆ ಘೋಷಿಸಲಾಗಿದೆ. ಕೇರಳದ ನಾಡ ಹಬ್ಬವಾದ ಕಾರಣ ಇಂದು ಎಲ್ಲಾ ಶಾಲೆಗಳಲ್ಲೂ ಓಣಂ ಆಚರಣೆ ವಿಶೇಷ ಔತಣ ಏರ್ಪಡಿಸಲಾಗಿದೆ.

ಆಗಸ್ಟ್ 21ರಂದು ಶಾಲೆಗಳಲ್ಲಿ ಓಣಂ ಆಚರಣೆ ಕಾರ್ಯಕ್ರಮಗಳನ್ನು ನಡೆಸಲು ಶಿಕ್ಷಣ ಇಲಾಖೆ ಸೂಚಿಸಿತ್ತು. ಆಗಸ್ಟ್ 14ರಿಂದ 20ರವರೆಗೆ ಓಣಂ ಪರೀಕ್ಷೆಗಳು ನಡೆದಿದ್ದವು. ಪರೀಕ್ಷೆ ನಡೆಯಬೇಕಿದ್ದ ದಿನದಂದು ರಜೆ ಬಂದ ಕಾರಣ, ಆ ಪರೀಕ್ಷೆಯನ್ನು ಆಗಸ್ಟ್ 21ರಂದು ನಡೆಸುವಂತೆ ಶಿಕ್ಷಣ ಇಲಾಖೆ ನಿರ್ದೇಶನ ನೀಡಿತ್ತು.

ವಿದ್ಯಾರ್ಥಿಗಳಿಗೆ ಒಟ್ಟು ಒಂಬತ್ತು ದಿನಗಳ ಓಣಂ ರಜೆ ಲಭಿಸಲಿದೆ. ರಜೆ ಮುಗಿದ ಬಳಿಕ ಆಗಸ್ಟ್ 31ರಂದು ರಾಜ್ಯದ ಶಾಲೆಗಳು ಪುನರಾರಂಭಗೊಳ್ಳಲಿವೆ.

Post a Comment

0 Comments

ಜಾಹೀರಾತು

Responsive Advertisement