Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಾನ್ಯ ದೇವಸ್ಥಾನದ ನಿವೃತ್ತಿ ರಾಶಿ ಚಿಂತನೆ, ನಿಧಿ ಸಂಚಯನದ ಆಮಂತ್ರಣ ಪತ್ರಿಕೆ ಬಿಡುಗಡೆ


ಬದಿಯಡ್ಕ : ಕಳೆದ ಕೆಲವು ಶತಮಾನಗಳ ಮೊದಲು ಸಂಪೂರ್ಣವಾಗಿ ಜೀರ್ಣವಾಗಿದ್ದ ಮಾನ್ಯ ಶ್ರೀ ಮಹಾದೇವನ ಸಾನ್ನಿಧ್ಯದ ಪುನರುತ್ಥಾನದ ಭಾಗವಾಗಿ ನಡೆಯುವ ಅಷ್ಟಮಂಗಲ ಪ್ರಶ್ನೆಯ ನಿವೃತ್ತಿ ರಾಶಿ ಚಿಂತನೆ ಹಾಗೂ ನಿಧಿ ಸಂಚಯನದ ಆಮಂತ್ರಣ ಪತ್ರಿಕೆಯನ್ನು ಶ್ರೀ ಎಡನೀರು ಮಠದಲ್ಲಿ  ಬಿಡುಗಡೆಗೊಳಿಸಲಾಯಿತು.

ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಯಕ್ಷಗಾನ ಅಷ್ಟಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.

ಮಾನ್ಯ ಶ್ರೀ ಮಹಾದೇವ ದೇವಸ್ಥಾನದ ಪದಾಧಿಕಾರಿಗಳಾದ ಶ್ರೀಕೃಷ್ಣ ಭಟ್ ಪುದುಕೋಳಿ, ಮಹೇಶ್ ವಳಕ್ಕುಂಜ, ರವಿಶಂಕರ ಎಂ. ಮಾನ್ಯ, ಗೋಪಾಲ ಭಟ್ ಪಿ.ಎಸ್., ವೆಂಕಟ್ರಮಣ ಸಿ.ಎಚ್., ವಿಜಯ ಕುಮಾರ್ ಮಾನ್ಯ ಉಪಸ್ಥಿತರಿದ್ದರು. ಅಷ್ಟಮಂಗಲ ಪ್ರಶ್ನೆಯ ನಿವೃತ್ತಿ ರಾಶಿ ಚಿಂತನೆ ಹಾಗೂ ನಿಧಿ ಸಂಚಯನ ಕಾರ್ಯಕ್ರಮ ಆ.21ರಂದು ಸಾನ್ನಿಧ್ಯ ಸ್ಥಳದಲ್ಲಿ ಜರುಗಲಿದೆ.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement