Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಎಸ್‌ಬಿಐ ನಾಲ್ಕು ಎಟಿಎಂ ವಹಿವಾಟುಗಳು ಮಾತ್ರ ಉಚಿತ : ಅಧಿಕವಾದರೆ 15 ರೂ. ಶುಲ್ಕ

 


ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಬಿಎಸ್ಬಿಡಿ  ಖಾತೆದಾರರ ಸೇವಾ ಶುಲ್ಕಗಳಲ್ಲಿ ಬದಲಾವಣೆ ಮಾಡಿದೆ. ಪರಿಷ್ಕೃತ ಶುಲ್ಕಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ.

ಇನ್ನು ಮುಂದೆ ತಿಂಗಳಿಗೆ ನಾಲ್ಕು ಎಟಿಎಂ ವಹಿವಾಟುಗಳು ಮಾತ್ರ ಉಚಿತವಾಗಿರಲಿವೆ. ನಾಲ್ಕು ವಹಿವಾಟುಗಳ ಮಿತಿಯನ್ನು ಮೀರಿದ ಪ್ರತಿ ಎಟಿಎಂ ವಹಿವಾಟಿಗೆ 15 ರೂ. ಹಾಗೂ ಜಿಎಸ್‌ಟಿ ಸೇವಾ ಶುಲ್ಕವಾಗಿ ವಿಧಿಸಲಾಗುತ್ತದೆ.

ಎಸ್‌ಬಿಐ ಎಟಿಎಂ ಹಾಗೂ ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಒಟ್ಟು ನಾಲ್ಕು ಬಾರಿ ಮಾತ್ರ ಉಚಿತವಾಗಿ ಹಣ ಹಿಂಪಡೆಯಬಹುದು. ನಾಲ್ಕು ವಹಿವಾಟುಗಳ ನಂತರ ಪ್ರತಿ ಹಣ ಹಿಂಪಡೆಯುವಿಕೆಗೆ ಶುಲ್ಕ ಪಾವತಿಸಬೇಕಾಗುತ್ತದೆ.

ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (AePS) ಮೂಲಕ ನಡೆಯುವ ವಹಿವಾಟುಗಳನ್ನೂ ಇನ್ನು ಮುಂದೆ ನಾಲ್ಕು ಉಚಿತ ವಹಿವಾಟುಗಳ ಮಿತಿಯಲ್ಲಿ ಸೇರಿಸಲಾಗುತ್ತದೆ. ಆದರೆ ಡಿಜಿಟಲ್ ವಹಿವಾಟುಗಳು ಸಂಪೂರ್ಣ ಉಚಿತವಾಗಿ ಮುಂದುವರಿಯಲಿವೆ.

ಕನಿಷ್ಠ ಬ್ಯಾಲೆನ್ಸ್‌ ನಿಯಮವಿಲ್ಲದೆ ಮೂಲಭೂತ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುವ ಖಾತೆಗಳೇ ಬಿಎಸ್ಬಿಡಿ ಖಾತೆಗಳು. ಈ ಖಾತೆಗಳಿಗೆ ಚೆಕ್‌ಬುಕ್ ಸೌಲಭ್ಯ ಇರುವುದಿಲ್ಲ. ಬದಲಿಗೆ ರೂಪೇ ಎಟಿಎಂ ಕಾರ್ಡ್ ನೀಡಲಾಗುತ್ತದೆ. ಸಾಮಾನ್ಯ ಉಳಿತಾಯ ಖಾತೆ ಹೊಂದಿರುವವರು ಬಿಎಸ್ಬಿಡಿ ಖಾತೆ ತೆರೆಯಲು ಸಾಧ್ಯವಿಲ್ಲ.

Post a Comment

0 Comments

ಜಾಹೀರಾತು

Responsive Advertisement