Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಯರ್ ಕಟ್ಟೆ ಶಾಲೆಯಲ್ಲಿ ವಿದ್ಯಾರ್ಥಿಗಳ ಮಾಸಪತ್ರಿಕೆ ‘ಜ್ಞಾನಜ್ಯೋತಿ’ ಬಿಡುಗಡೆ


ಪೈವಳಿಕೆ : ವಿದ್ಯಾರ್ಥಿಗಳ ಸೃಜನಶೀಲತೆ, ಸಾಹಿತ್ಯಾಸಕ್ತಿ ಹಾಗೂ ಬರವಣಿಗೆಯ ಕೌಶಲವನ್ನು ಉತ್ತೇಜಿಸುವ ಉದ್ದೇಶದಿಂದ ಸರಕಾರಿ ಉನ್ನತ ಪ್ರೌಢ ಶಾಲೆ ಪೈವಳಿಕೆ ಕಾಯರ್ ಕಟ್ಟೆ ವಿದ್ಯಾರ್ಥಿಗಳ ಮಾಸಪತ್ರಿಕೆ ‘ಜ್ಞಾನಜ್ಯೋತಿ’ ಬಿಡುಗಡೆ ಕಾರ್ಯಕ್ರಮ ನಡೆಯಿತು. ಎಸ್ ವಿ ವಿ ಎಸ್ ಮೀಯಪದವು ಶಾಲೆ ನಿವೃತ್ತ  ಮುಖ್ಯೋಪಾಧ್ಯಾಯರಾದ ರಾಜಾರಾಮ್ ರಾವ್ ಅವರು ಲೇಖಕಿ ರಾಜಶ್ರೀ ರೈ ಪೆರ್ಲ ಅವರಿಗೆ ಮಾಸಪತ್ರಿಕೆಯ ಪ್ರತಿಯನ್ನು ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜಾರಾಮ್ ರಾವ್, ವಿದ್ಯಾರ್ಥಿಗಳಲ್ಲಿರುವ ಸೃಜನಶೀಲ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸುವಲ್ಲಿ ‘ಜ್ಞಾನಜ್ಯೋತಿ’ ಮಾಸಪತ್ರಿಕೆ ಮಹತ್ವದ ಪಾತ್ರ ವಹಿಸಲಿ. ಬರವಣಿಗೆ, ಚಿಂತನೆ ಹಾಗೂ ಅಭಿವ್ಯಕ್ತಿ ಕೌಶಲಗಳನ್ನು ಬೆಳೆಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ ಮತ್ತು ಅಭಿರುಚಿಯನ್ನು ರೂಪಿಸುವಲ್ಲಿ ಇಂತಹ ಸಾಹಿತ್ಯಿಕ ಚಟುವಟಿಕೆಗಳು ಸಹಕಾರಿಯಾಗಲಿವೆ. ತಮ್ಮೊಳಗಿನ ಪ್ರತಿಭೆಯನ್ನು ಮುಕ್ತವಾಗಿ ವ್ಯಕ್ತಪಡಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ‘ಜ್ಞಾನಜ್ಯೋತಿ’ ಅರ್ಥಪೂರ್ಣ ಹೆಜ್ಜೆಯಾಗಲಿ ಎಂದು ಅವರು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಟಿಎ ಅಧ್ಯಕ್ಷ ಆದಂ ಬಳ್ಳೂರು ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ಭಾಗ್ಯಲಕ್ಷ್ಮಿ, ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಸಾಯಿ ಸುಮಾ ನಾವಡ, ಹೈಯರ್  ಸೆಕೆಂಡರಿ ವಿಭಾಗದ ಕನ್ನಡ ಅಧ್ಯಾಪಕಿ ಬೇಬಿ, ಅಧ್ಯಾಪಕರಾದ ಅಶ್ರಫ್ ಮರ್ತ್ಯ, ಉದಯ ಕೆ, ಪ್ರಿಯಾಂಕ, ರಕ್ಷಿತಾ ಸೇರಿದಂತೆ ಹಲವರು ಪಸ್ಥಿತರಿದ್ದರು.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost 

Post a Comment

0 Comments

ಜಾಹೀರಾತು

Responsive Advertisement