ಮುಂಬೈ: ಗಣೇಶೋತ್ಸವ ಮೆರವಣಿಗೆಯ ವೇಳೆ ಬೃಹತ್ ಗಣೇಶ ಮೂರ್ತಿ ಮಗುಚಿಬಿದ್ದು ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಮುಂಬೈನ ಭುಲೇಶ್ವರದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಭುಲೇಶ್ವರದ ‘ಭುಲೇಶ್ವರಾಚಾ ರಾಜಾ’ ಗಣೇಶ ಮೂರ್ತಿಯ ಮೆರವಣಿಗೆ ವೇಳೆ ಶನಿವಾರ ರಾತ್ರಿ 9.51ರ ಸುಮಾರಿಗೆ ಜಯ ಅಂಬೆ ಚೌಕ್‌ನ ಕಬೂತರ ಖಾನಾ ಬಳಿ ಈ ಅಪಘಾತ ಸಂಭವಿಸಿದೆ.
ಮೃತರನ್ನು ಸಂಕೇತ್ ನೆವ್ಶೆ ( 33) ಮತ್ತು ಬ್ರೀಜೇಶ್ ಹೇಮಂತ್ ಜೋಶಿ (30) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದರು. ಘಟನೆ ತಿಳಿಯುತ್ತಿದ್ದಂತೆ ಮುಂಬೈ ಅಗ್ನಿಶಾಮಕ ದಳ, ಪೊಲೀಸರು, ಟ್ರಾಫಿಕ್ ಪೊಲೀಸರು, ಆಂಬ್ಯುಲೆನ್ಸ್ ಸೇವೆ ಹಾಗೂ ಬೃಹನ್‌ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಗೊಂಡವರಲ್ಲಿ 5 ವರ್ಷದ ಬಾಲಕಿ ಮತ್ತು 7 ವರ್ಷದ ಬಾಲಕ ಕೂಡ ಇದ್ದಾರೆ. ವೈಭವ್ ಖೇನಂದ್ (38), ಪವನ್ ಚೌರಾಸ್ಯ (25), ಲಾವಣ್ಯ ಗಾನರ್ (5), ದಿವ್ಯಾ ಗಾನರ್ (7) ಹಾಗೂ ಕುನಾಲ್ ಕಾಶಿತ್ (26) ಗಾಯಗೊಂಡಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

0 Comments