Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಉದಯಗಿರಿ ಶಾಲೆಯಲ್ಲಿ ಸಂಭ್ರಮದ ಓಣಂ ಆಚರಣೆ.


ಬದಿಯಡ್ಕ : ನಾಡಿನಲ್ಲಿ ಸ್ನೇಹ ಮತ್ತು ಸೌಹಾರ್ದತೆ ಬಿಂಬಿಸುವ ಹಬ್ಬಗಳಲ್ಲಿ ಓಣಂ ಮುಖ್ಯ ಹಬ್ಬ ಎಂದು ಉದಯಗಿರಿ ಶಾಲೆಯ ನಿವೖತ್ತ ಮುಖ್ಯ ಶಿಕ್ಷಕಿ ಪ್ರಸನ್ನ ಕುಮಾರಿ ಅಭಿಪ್ರಾಯಪಟ್ಟರು. ಮಹಾಬಲಿಯು ಕೇರಳದ ವೀಕ್ಷಣೆಗೆ ಬರುವ ಸಮೖಧ್ಧಿಯ ಸಂಭ್ರಮದ ಹೂ ರಂಗೋಲಿ ಹಾಗೂ ಔತಣಗಳು ಅಭಿವೃದ್ಧಿಯ ಸಂಕೇತ ಎಂದು ಅವರು ನುಡಿದರು. ಶಾಲೆಯ ಓಣಂ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು. ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷೆ ಭವ್ಯಶ್ರೀ ಅಧ್ಯಕ್ಷತೆವಹಿಸಿದ್ದರು. ಶಾಲಾಭಿವೖಧ್ಧಿ ಮಂಡಳಿಯ ಕೖಷ್ಣಪ್ರಸಾದ್, ವಾರ್ಡ್ ಸದಸ್ಯ ಬದಿಯಡ್ಕ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ,ಅಂಗನವಾಡಿ ಶಿಕ್ಷಕಿ ಚಿತ್ರಲೇಖ ಆಗಮಿಸಿ ಶುಭ ಕೋರಿದರು. ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.ಮುಖ್ಯಶಿಕ್ಷಕ ಶ್ರೀಧರ ಭಟ್ ಸ್ವಾಗತಿಸಿ ಶಿಕ್ಷಕ ಶಿವರಾಮ್ ವಂದಿಸಿದರು.ಶಿಕ್ಷಕಿಯರಾದ ಪವಿತ್ರ, ಗೀತಮಾಲಿನಿ, ಅನು ಅವರು ಹೂ ರಂಗೋಲಿ ರಚಿಸಲು ಸಹಕರಿಸಿದರು. ಕಮಲ, ರಾಜೇಶ್ವರಿ, ಕುಸುಮ ಮೊದಲಾದವರ ನೇತೃತ್ವದಲ್ಲಿ ಓಣಂ ಔತಣ ಏರ್ಪಡಿಸಲಾಯಿತು.

Post a Comment

0 Comments

ಜಾಹೀರಾತು

Responsive Advertisement