ಕಳತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕು ಹಾಗೂ ಕಿದೂರು ಶ್ರೀ ಮಹಾದೇವ ನವಜೀವನ ಸಮಿತಿ ಕಳತ್ತೂರು–ಕುಂಬಳೆ ವಲಯದ ಆಶ್ರಯದಲ್ಲಿ ನವಜೀವನೋತ್ಸವ ಹಾಗೂ 3ನೇ ವರ್ಷದ ‘ಕೆಸರ ಕಂಡೊಡು – ಕುಸಲ್ದ ಗೊಬ್ಬುಲು’ ಕ್ರೀಡೋತ್ಸವವು ಕಳತ್ತೂರಿನಲ್ಲಿ ಆರಂಭಗೊಂಡಿತು.
ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ನಡೆದ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಉದ್ಘಾಟಿಸಿ ಮಾತನಾಡುತ್ತಾ ವರ್ಷದಲ್ಲೊಮ್ಮೆ ನಡೆಯುವ ಈ ಕ್ರೀಡೋತ್ಸವದಲ್ಲಿ ನವಜೀವನ ಸಮಿತಿಯ ಕುಟುಂಬಗಳು ಸಂಭ್ರಮದಿಂದ ಪಾಲ್ಗೊಳ್ಳುವ ಸಮುದಾಯಿಕ ಉತ್ಸವವಾಗಿ ಪರಿವರ್ತನೆಯಾಗಬೇಕು. ಸಂಸಾರದಲ್ಲಿ ಯಾವುದೇ ದುಗುಡ ದುಮ್ಮಾನಗಳಿದ್ದರೂ ಇಲ್ಲಿ ಎಲ್ಲರೂ ಒಂದಾಗಿ ಹಾಡಿ ಕುಣಿದಾಗ ದೂರವಾಗುವಂತಿರಬೇಕು ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕು ಅಧ್ಯಕ್ಷ ಮಂಜುನಾಥ ಅಳ್ವ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹಾಗೂ 2080ನೇ ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಕಳತ್ತೂರು ಅಧ್ಯಕ್ಷ ಜಯಪ್ರಸಾದ ರೈ ಕಾರಿಂಜ, ಎಸ್‌ಪಿಎಡಿ ಸಂಸ್ಥೆ ಬೆಂಗಳೂರು ನಿರ್ದೇಶಕ ಜೀವನನಾಥ್ ಜೋಡುಕಟ್ಟೆ,,ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕು ನಿಕಟಪೂರ್ವ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಅಶ್ವಥ್ ಪೂಜಾರಿ ಲಾಲ್‌ಬಾಗ್, 2080ನೇ ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಕಳತ್ತೂರು ಗೌರವಾಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ಸುಕೇಶ್ ಭಂಡಾರಿ,ನಿವೃತ್ತ ವಿಲೇಜ್ ಆಫೀಸರ್ ಶಿವರಾಮ ಶೆಟ್ಟಿ ಮಾಣಿಬೆಟ್ಟು,ಕಳತ್ತೂರು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಮಾಸ್ಟರ್,ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ, ಕರಾವಳಿ ಪ್ರಾದೇಶಿಕ ವಿಭಾಗ ಉಡುಪಿಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ ಆಚಾರ್ಯ, ಕಳತ್ತೂರು ಒಕ್ಕೂಟ ಅಧ್ಯಕ್ಷ ಉದಯ, ಕುಪ್ಪೆ ಪಂಜುರ್ಲಿ ದೈವಸ್ಥಾನ ಕುಂಟೆಂಗೇರಡ್ಕದ ಅಧ್ಯಕ್ಷ ಚಂದ್ರ ಕಾಜೂರು, ಮಹಾದೇವ ಭಜನಾ ಮಂದಿರ ಕಳತ್ತೂರು ಅಧ್ಯಕ್ಷ ಬಾಲಕೃಷ್ಣ ನೆಲ್ಕಡ್ಕ ಹಾಗೂ ಸಮಿತಿಯ ಸ್ಥಾಪಕಾಧ್ಯಕ್ಷ ಯೋಗೀಶ್ ಆಚಾರ್ಯ ಶ್ರೀನಗರ,ಸಂಘಟಕ ರಿತೇಶ್ ಆಳ್ವ ಕಳತ್ತೂರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಧ.ಗ್ರಾ.ಯೋಜನೆಯ ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಸೇವಾ ಪ್ರತಿನಿಧಿ ಅಭಿಷೇಕ್ ಸ್ವಾಗತಿಸಿ ನಾರಾಯಣ ಟೈಲರ್ ಕಳತ್ತೂರು ವಂದಿಸಿದರು. ಅಶ್ವಿನಿ ಪೆರುವಾಯಿ ನಿರೂಪಿಸಿದರು.



0 Comments