Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕುಡಿದ ಮದ್ಯದ ಮತ್ತಿನ ಜತೆಗೆ ಸರಕಾರಿ ಉದ್ಯೋಗಸ್ಥರೆಂಬ ಗತ್ತು..! : ಹೆಲ್ಮೆಟ್ ಧರಿಸದೆ ಡ್ರಿಂಕ್ ಎಂಡ್ ಡ್ರೈವ್ ಇಬ್ಬರ ವಿರುದ್ಧ ಕೇಸು


ಕಾಸರಗೋಡು : ಹೆಲ್ಮೆಟ್ ಧರಿಸದೆ, ಮದ್ಯದ ಲಹರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗವಾಗಿ ಬೈಕ್ ಓಡಿಸಿ, ಪೊಲೀಸರು ಕೈ ತೋರಿಸಿದರೂ ನಿಲ್ಲಿಸದೆ ‘ಸ್ಪೀಡ್’ನಲ್ಲಿ ಪರಾರಿಯಾಗಲು ಯತ್ನಿಸಿದ ಆರೋಪದ ಮೇಲೆ ಮಂಜೇಶ್ವರ ಪಂಚಾಯತ್‌ನ ಇಬ್ಬರು ಸರ್ಕಾರಿ ಸಿಬ್ಬಂದಿಗಳ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಂಜೇಶ್ವರ ಪಂಚಾಯತ್‌ನ ಸೀನಿಯರ್ ಕ್ಲರ್ಕ್, ತಿರುವನಂತಪುರ ಕಾಞ್ಜಿರಂಕ್ಕೂಲಂ ನಿವಾಸಿ ಕೆ.ಎ. ಅನೀಶ್ ಕುಮಾರ್ (39) ಹಾಗೂ ಓವರ್‌ಸೀಯರ್, ಕಾಲಿಚಾನಡುಕ್ಕ ಶಾಸ್ತಾಂಪಾರ ನಿವಾಸಿ ಎ. ರವೀಂದ್ರನ್ (49) ಪ್ರಕರಣದ ಆರೋಪಿಗಳು.

ಮಂಗಳವಾರ ಸಂಜೆ ಸುಮಾರು 6.30ರ ವೇಳೆಗೆ ತಲಪ್ಪಾಡಿಯಲ್ಲಿ ಮಂಜೇಶ್ವರ ಗ್ರೇಡ್ ಎಸ್‌.ಐ. ವಿ. ಸುನಿಲ್ ಕುಮಾರ್ ನೇತೃತ್ವದ ಹೆದ್ದಾರಿ ಗಸ್ತು ತಂಡ ಕರ್ತವ್ಯದಲ್ಲಿದ್ದಾಗ, ಮಂಗಳೂರು ಕಡೆಯಿಂದ ಕಾಸರಗೋಡು ಕಡೆಗೆ ಹೆಲ್ಮೆಟ್ ಇಲ್ಲದೆ ಬೈಕ್ ‘ಸ್ಪೀಡ್ ಮೋಡ್’ನಲ್ಲಿ ಬರುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಪೊಲೀಸರು ಕೈ ತೋರಿಸಿ ನಿಲ್ಲಿಸುವಂತೆ ಸೂಚಿಸಿದರೂ ಬೈಕ್ ನಿಲ್ಲಿಸುವ ಬದಲು ವೇಗ ಹೆಚ್ಚಿಸಿಕೊಂಡಿದೆ ಎನ್ನಲಾಗಿದೆ. ಬೈಕ್‌ನ ಹಿಂಬದಿ ಕುಳಿತಿದ್ದ ವ್ಯಕ್ತಿ ಪೊಲೀಸರನ್ನು ಕಂಡು ‘ನಿಲ್ಲಿಸಬೇಡ... ಸ್ಪೀಡ್‌ನಲ್ಲಿ ಬಿಟ್ಟು ಹೋಗು!’ ಎಂದು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಆದರೆ ಸಿನಿಮಾದ ಹೀರೋಗಳಂತೆ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಳ್ಳುವ ಪ್ರಯತ್ನ ಹೆಚ್ಚು ದೂರ ಸಾಗಲಿಲ್ಲ. ಮಂಜೇಶ್ವರ ರೈಲು ನಿಲ್ದಾಣ ರಸ್ತೆಯಲ್ಲಿ ಪೊಲೀಸರು ಬೈಕ್‌ನ್ನು ಹಿಡಿದು ನಿಲ್ಲಿಸಿದರು. ವಾಹನ ಸವಾರ ಮದ್ಯ ಸೇವಿಸಿರುವುದು ಪೊಲೀಸರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಬಳಿಕ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ.

ಹೆಲ್ಮೆಟ್ ಇಲ್ಲದೆ, ಮದ್ಯದ ಮತ್ತಿನಲ್ಲಿ ಅತಿವೇಗವಾಗಿ ವಾಹನ ಚಲಾಯಿಸಿ, ಹಿಂಬದಿ ಪ್ರಯಾಣಿಕನ ಜೀವಕ್ಕೂ ಅಪಾಯ ಉಂಟುಮಾಡುವ ರೀತಿಯಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡಿದ ಆರೋಪ ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

Post a Comment

0 Comments

ಜಾಹೀರಾತು

Responsive Advertisement