ಉಪ್ಪಳ : ಅಟ್ಟೆಗೋಳಿಯ ದಿ.ಸುಬ್ಬ ಎಂಬವರ ಪುತ್ರ ಬಾಲಕೃಷ್ಣ(55) ಕಳೆದ ಸೋಮವಾರದಿಂದ ನಾಪತ್ತೆಯಾಗಿದ್ದಾರೆ. ಕೂಲಿ ಕಾರ್ಮಿಕರಾದ ಇವರು ಚೌತಿಯ ದಿವಸ ಜೋಡುಕಲ್ಲಿನಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ತಿಳಿಸಿ ತೆರಳಿದವರು ಮನೆಗೆ ಮರಳಿ ಬರಲಿಲ್ಲ ಎಂದು ಇವರ ಸಹೋದರ ಜಯರಾಮ ತಿಳಿಸಿದ್ದಾರೆ. ಕಳೆದ ಐದು ದಿನಗಳಿಂದ ಮನೆಗೆ ಬಾರದೆ ಇದ್ದು ಮನೆಯವರು ಹುಡುಕಾಡುತಿದ್ದಾರೆ. ಸ್ವಲ್ಪ ಬುದ್ಧಿ ಮಂದತೆ ಇರುವ ಇವರನ್ನು ಯಾರಾದರೂ ಕಂಡಲ್ಲಿ ದೂರವಾಣಿ ಸಂಖ್ಯೆ 9747831806 ರಲ್ಲಿ ಕರೆ ಮಾಡಿ ತಿಳಿಸಬೇಕಾಗಿ ವಿನಂತಿಸಲಾಗಿದೆ.

0 Comments